ಕಾಸರಗೋಡು | ಪತ್ನಿಯ ಕೊಲೆ ಯತ್ನ ಪ್ರಕರಣ: ಆರೋಪಿ ಪತಿಯ ಬಂಧನ

Update: 2022-09-14 11:34 GMT
ಫ್ರಾನ್ಸಿಸ್ ಡಿ ಸೋಜ - ಬಂಧಿತ ಆರೋಪಿ

ಕಾಸರಗೋಡು: ಪತ್ನಿಯ ಕೊಲೆಗೆ ತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತ  ಆರೋಪಿ ಪತಿಯನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಕೆದಂಬಾಡಿಯ ಫ್ರಾನ್ಸಿಸ್ ಡಿ ಸೋಜ (48) ಬಂಧಿ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. 

2015 ರಲ್ಲಿ ಘಟನೆ ನಡೆದಿತ್ತು.  ಕ್ಷುಲ್ಲಕ ಕಾರಣಕ್ಕೆ ಪತ್ನಿಯನ್ನು ಮಾರಕಾಸ್ತ್ರದಿಂದ ತಲೆಗೆ ಬಡಿದು ಕೊಲೆಗೆ ಯತ್ನಿಸಿದ್ದನು. ಈತನ ವಿರುದ್ಧ ಕೊಲೆ ಯತ್ನ ಮೊಕದ್ದಮೆ  ಹೂಡಲಾಗಿತ್ತು.

ಕೃತ್ಯ ದ ಬಳಿಕ  ಈತ ತಲೆ ಮರೆಸಿ ಕೊಂಡಿದ್ದು,  ವರ್ಷಗಳ ಬಳಿಕ ಊರಿಗೆ ಬಂದಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಈತನನ್ನು ಬಂಧಿಸುವಲ್ಲಿ ಯಶಸ್ವಿ ಯಾಗಿದ್ದಾರೆ. 

ಇದನ್ನೂ ಓದಿ: ಬಿಎಸ್‌ ವೈ, ಕುಟುಂಬದ ಸದಸ್ಯರು, ಸಚಿವ ಸೋಮಶೇಖರ್‌ ವಿರುದ್ಧ FIR ದಾಖಲಿಸಿ, ತನಿಖೆ ನಡೆಸಲು ಕೋರ್ಟ್ ಸೂಚನೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News