×
Ad

ಮಧ್ಯಪ್ರದೇಶ: ಅಪಘಾತಕ್ಕೀಡಾದ ವ್ಯಕ್ತಿಯನ್ನು ಜೆಸಿಬಿಯಲ್ಲಿ ಆಸ್ಪತ್ರೆಗೆ ಕರೆದೊಯ್ದ ವಿಡಿಯೋ ವೈರಲ್

Update: 2022-09-14 14:43 IST
Photo:ANI

ಭೋಪಾಲ್: ಮಧ್ಯಪ್ರದೇಶದ ಕಟ್ನಿ ಜಿಲ್ಲೆಯಲ್ಲಿ ಅಪಘಾತಕ್ಕೀಡಾದ ವ್ಯಕ್ತಿಯನ್ನು ಜೆಸಿಬಿಯಲ್ಲಿ ಆಸ್ಪತ್ರೆಗೆ ಕರೆದೊಯ್ಯುವ ವೀಡಿಯೊ ವೈರಲ್ ಆದ ಒಂದು ದಿನದ ನಂತರ ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಸಂಜಯ್ ಪಾಠಕ್ ‘ಆಂಬ್ಯುಲೆನ್ಸ್ ಲಭ್ಯವಿರಲಿಲ್ಲ ಎಂಬ ಆರೋಪದ ವರದಿಗಳು ತಪ್ಪು’ ಎಂದು ಬುಧವಾರ ಹೇಳಿದ್ದಾರೆ.

 ಅಪಘಾತದ ಸ್ಥಳದಲ್ಲಿನ  ಜನರು ಸಹಾಯವಾಣಿ ಸಂಖ್ಯೆಗೆ ಬದಲಾಗಿ ಆಂಬ್ಯುಲೆನ್ಸ್ ಚಾಲಕನನ್ನು ಸಂಪರ್ಕಿಸಿದರು. ಆಗ  ಅವರು ಲಭ್ಯವಿರಲಿಲ್ಲ ಎಂದು ಪಾಠಕ್ ಹೇಳಿದರು.

“ವಾಸ್ತವದಲ್ಲಿ ಎರಡು ಆಂಬ್ಯುಲೆನ್ಸ್‌ಗಳು ಸಿದ್ಧವಾಗಿವೆ ಮತ್ತು ಸ್ಥಳೀಯ ಆಸ್ಪತ್ರೆಯಲ್ಲಿ ಲಭ್ಯವಿದೆ. ನಾನು ಸಮಸ್ಯೆಯನ್ನು ವಿಚಾರಿಸಿದಾಗ ಆಂಬ್ಯುಲೆನ್ಸ್‌ನ ಚಾಲಕನನ್ನು ಸಂಪರ್ಕಿಸಲಾಗಿದೆ. ಆದರೆ ಆತ ಫೋನ್  ಪಿಕ್ ಮಾಡಲಿಲ್ಲ ಎನ್ನುವುದು ಗೊತ್ತಾಯಿತು. ಸಂತ್ರಸ್ತ ಆಂಬ್ಯುಲೆನ್ಸ್ ಚಾಲಕನನ್ನು ಸಂಪರ್ಕಿಸಲು ಸಾಧ್ಯವಾಗದಿದ್ದಾಗ ಬಿಜೆಪಿ ಕಾರ್ಯಕರ್ತರೊಬ್ಬರು ತಮ್ಮ ಜೆಸಿಬಿಯಲ್ಲಿ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲು ಮುಂದಾದರು’’ ಎಂದು ಪಾಠಕ್ ಹೇಳಿದರು.

ಅಧಿಕಾರಿಗಳ ಪ್ರಕಾರ, ವ್ಯಕ್ತಿಯ ಬೈಕ್ ಅಪಘಾತಕ್ಕೀಡಾಗಿದ್ದು, 108 ಸಹಾಯವಾಣಿಗೆ ಕರೆ ಮಾಡಿದ್ದರೂ ಯಾವುದೇ ಆಂಬ್ಯುಲೆನ್ಸ್ ಲಭ್ಯವಿರಲಿಲ್ಲ.ಆಂಬುಲೆನ್ಸ್ ಹತ್ತಿರದ ಪಟ್ಟಣದಿಂದ ಬರುತ್ತಿತ್ತು. ಸ್ಥಳಕ್ಕೆ ತಲುಪುವಾಗ ತಡವಾಯಿತು. ನಾವು ಹೊಸ ಆಂಬ್ಯುಲೆನ್ಸ್‌ಗಾಗಿ ಪ್ರಸ್ತಾವನೆಯನ್ನು ಕಳುಹಿಸಿದ್ದೇವೆ ”ಎಂದು ಕಟ್ನಿಯ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಪ್ರದೀಪ್ ಮುದಿಯಾ ANI ಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News