ಸರಕಾರಿ ನಿವಾಸವನ್ನು 6 ವಾರಗಳೊಳಗೆ ತೆರವುಗೊಳಿಸುವಂತೆ ಸುಬ್ರಮಣಿಯನ್ ಸ್ವಾಮಿಗೆ ಕೋರ್ಟ್ ಸೂಚನೆ

Update: 2022-09-14 11:24 GMT
ಸುಬ್ರಮಣಿಯನ್ ಸ್ವಾಮಿ

ಹೊಸದಿಲ್ಲಿ: ರಾಜಧಾನಿಯ ಲುಟ್ಯೆನ್ಸ್ ಬಂಗಲೆ ವಲಯದಲ್ಲಿರುವ ತಮ್ಮ ಸರಕಾರಿ ನಿವಾಸವನ್ನು ಆರು ವಾರಗಳೊಳಗಾಗಿ ತೆರವುಗೊಳಿಸಿ ಸರಕಾರಕ್ಕೆ ಹಸ್ತಾಂತರಿಸಬೇಕು ಎಂದು ದಿಲ್ಲಿ ಹೈಕೋರ್ಟ್ ಇಂದು ಮಾಜಿ ರಾಜ್ಯಸಭಾ ಸದಸ್ಯ ಡಾ. ಸುಬ್ರಮಣಿಯನ್ ಸ್ವಾಮಿ (Subramanian Swamy) ಅವರಿಗೆ ನಿರ್ದೇಶನ ನೀಡಿದೆ.

ಸ್ವಾಮಿ ಅವರಿಗೆ ಈ ಬಂಗಲೆಯನ್ನು ಐದು ವರ್ಷ ಅವಧಿಗೆ ನೀಡಲಾಗಿತ್ತು ಹಾಗೂ ಆ ಅವಧಿ ಮುಕ್ತಾಯಗೊಂಡಿದೆ ಎಂದು ಜಸ್ಟಿಸ್ ಯಶವಂತ ವರ್ಮ ಹೇಳಿದರು.

ಝೆಡ್ ದರ್ಜೆಯ ರಕ್ಷಣೆಯನ್ನು ಪಡೆಯುತ್ತಿರುವವರಿಗೆ ಸರಕಾರಿ ನಿವಾಸ ಮಂಜೂರುಗೊಳಿಸುವ ಅಗತ್ಯತೆಯನ್ನು ವಿವರಿಸುವ ಯಾವುದೇ ದಾಖಲೆಯನ್ನು ನ್ಯಾಯಾಲಯಕ್ಕೆ ತೋರಿಸಲಾಗಿಲ್ಲ, ಅರ್ಜಿದಾರರು ಇನ್ನು ಮುಂದೆ ವಾಸಿಸುವ ನಿವಾಸದಲ್ಲಿ ಅವರ ಭದ್ರತೆಯನ್ನು ಖಾತರಿಪಡಿಸುವಂತೆ ಸಂಬಂಧಿತ ಪ್ರಾಧಿಕಾರಗಳು ನೋಡಿಕೊಳ್ಳಬೇಕಾಗಿದೆ ಎಂದು ಜಸ್ಟಿಸ್ ವರ್ಮ ಅವರು ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ವಿಲೇವಾರಿಗೊಳಿಸುವ ವೇಳೆ ಹೇಳಿದರು.

ಎಪ್ರಿಲ್ 24ರ ತನಕ ರಾಜ್ಯಸಭಾ ಸದಸ್ಯರಾಗಿದ್ದ ಸ್ವಾಮಿ ಅವರು ಹೈಕೋರ್ಟ್ ಕದ ತಟ್ಟಿ  ಝೆಡ್ ವಿಭಾಗದ ಭದ್ರತೆ ಪಡೆಯುತ್ತಿರುವವರಿಗೆ ಅಗತ್ಯವಿರುವ ಭದ್ರತೆ ಏರ್ಪಾಟುಗಳನ್ನು ಪರಿಗಣಿಸಿ ತಮಗೆ ಈಗಾಗಲೇ ಮಂಜೂರುಗೊಳಿಸಲಾಗಿದ್ದ ನಿವಾಸದಲ್ಲಿ ಮುಂದುವರಿಯಲು ಅನುಮತಿಸಬೇಕೆಂದು ಕೋರಿದ್ದರು.

"ಖಾಸಗಿ ನಿವಾಸಕ್ಕೆ ತೆರಳುವುದಕ್ಕೆ ಯಾವುದೇ ಕಷ್ಟವಿಲ್ಲ ಆದರೆ ಹಲವಾರು ಭದ್ರತಾ ಸಿಬ್ಬಂದಿಗಳನ್ನು ಹೊಂದಿರುವುದರಿಂದ ನನ್ನ ಖಾಸಗಿ ನಿವಾಸ ಭದ್ರತಾ ಸಿಬ್ಬಂದಿಗಳಿಗೆ ನೆಲೆಸಲು, ವಿಶ್ರಾಂತಿ ಪಡೆಯಲು ಹಾಗೂ ಅವರ ಮೂಲಭೂತ ಅವಶ್ಯಕತೆಗಳನ್ನು ಈಡೇರಿಸಲು ಅದು ಸಾಕಾಗದು,'' ಎಂದು ಸ್ವಾಮಿ ನ್ಯಾಯಾಲಯಕ್ಕೆ ಹೇಳಿದ್ದರು.

ಇದನ್ನೂ ಓದಿ: ಅಪಘಾತಕ್ಕೀಡಾದ ವ್ಯಕ್ತಿಯನ್ನು ಜೆಸಿಬಿಯಲ್ಲಿ ಆಸ್ಪತ್ರೆಗೆ ಕರೆದೊಯ್ದ ವಿಡಿಯೋ ವೈರಲ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News