ಅಗ್ನಿಪಥ್ ನೇಮಕಾತಿ ರ್ಯಾಲಿಗಳನ್ನು ತಡೆಹಿಡಿಯಲಾಗುವುದು: ಪಂಜಾಬ್ ಸರಕಾರಕ್ಕೆ ತಿಳಿಸಿದ ಸೇನೆ

Update: 2022-09-14 12:17 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಸ್ಥಳೀಯಾಡಳಿತದಿಂದ ಸಾಕಷ್ಟು ಬೆಂಬಲ ದೊರೆಯದೇ ಇರುವ ಕಾರಣ, ಅಗ್ನಿಪಥ್ (Agnipath) ನೇಮಕಾತಿ ರ್ಯಾಲಿಗಳನ್ನು (recruitment rallies) ಪಂಜಾಬ್ ರಾಜ್ಯದಲ್ಲಿ ತಡೆಹಿಡಿಯಲಾಗುವುದು ಅಥವಾ ನೆರೆಯ ರಾಜ್ಯಗಳಿಗೆ ಸ್ಥಳಾಂತರಿಸಲಾಗುವುದು ಎಂದು ಜಲಂಧರ್ ನಲ್ಲಿರುವ ಸೇನೆಯ (Army) ವಲಯ ನೇಮಕಾತಿ ಅಧಿಕಾರಿ ಅವರು ಪಂಜಾಬ್(Punjab) ಸರಕಾರಕ್ಕೆ ಮಾಹಿತಿ ನೀಡಿದ್ದಾರೆ.

"ಸ್ಥಳೀಯಾಡಳಿತದಿಂದ ಬೆಂಬಲ ಸೂಕ್ತವಾಗಿಲ್ಲ ಹಾಗೂ ಯಾವುದೇ ಸ್ಪಷ್ಟವಾದ ಬದ್ಧತೆಗಳಿಲ್ಲ. ರಾಜ್ಯ ಸರಕಾರದಿಂದ ಸೂಕ್ತ ನಿರ್ದೇಶನಗಳಿಲ್ಲ ಅಥವಾ ಹಣಕಾಸಿನ ಕೊರತೆ ಬಗ್ಗೆ ಅವರು ಹೇಳುತ್ತಿದ್ದಾರೆ,'' ಎಂದು ಪಂಜಾಬ್ ಮುಖ್ಯ ಕಾರ್ಯದರ್ಶಿ ವಿ ಕೆ ಜಂಜುವಾ ಹಾಗೂ ರಾಜ್ಯದ ಉದ್ಯೋಗ ಸೃಷ್ಟಿ, ಕೌಶಲ್ಯಾಭಿವೃದ್ಧಿ ಇಲಾಖೆಯ ಮುಖ್ಯ ಕಾರ್ಯದರ್ಶಿ ಕುಮಾರ್ ರಾಹುಲ್ ಅವರಿಗೆ ಸೆಪ್ಟೆಂಬರ್ 8ರಂದೂ ಬರೆದ ಪತ್ರದಲ್ಲಿ ಸೇನೆಯ ಜಲಂಧರ್ ಘಟಕದ ವಲಯ ನೇಮಕಾತಿ ಅಧಿಕಾರಿ ಮೇಜರ್ ಜನರಲ್ ಶರದ್ ಬಿಕ್ರಮ್ ಸಿಂಗ್ ಹೇಳಿದ್ದಾರೆ.

ಅಗ್ನಿಪಥ್ ರ್ಯಾಲಿಗಳಿಗೆ ಸ್ಥಳೀಯಾಡಳಿತವು ವೈದ್ಯಕೀಯ ಬೆಂಬಲ, ವೈದ್ಯಕೀಯ ಅಧಿಕಾರಿ, ಸಿಬ್ಬಂದಿ, ಅಂಬುಲೆನ್ಸ್ ಗಳು, ಅಭ್ಯರ್ಥಿಗಳಿಗೆ ಇತರ ಮೂಲಭೂತ ಸೌಕರ್ಯಗಳನ್ನು ರ್ಯಾಲಿ ನಡೆಯುವ ಸ್ಥಳದಲ್ಲಿ 14 ದಿನಗಳ ಕಾಲ ಒದಗಿಸಬೇಕಿದೆ ಎಂದು ಪತ್ರ ವಿವರಿಸುತ್ತದೆ.

ರ್ಯಾಲಿಗಳಿಗೆ ಸೂಕ್ತ ಏರ್ಪಾಟು ಮಾಡದ ಹೊರತು ಅವುಗಳನ್ನು ತಡೆಹಿಡಿಯಲಾಗುವುದು ಅಥವಾ ಬೇರೆ ರಾಜ್ಯಗಳಿಗೆ ಸ್ಥಳಾಂತರಿಸಲಾಗುವುದು ಎಂದು ಪತ್ರದಲ್ಲಿ ಹೇಳಲಾಗಿದೆ.

ಈಗಾಗಲೇ ಲುಧಿಯಾನ ಹಾಗೂ ಗುರುದಾಸಪುರದಲ್ಲಿ ಶಿಬಿರಗಳು ನಡೆದಿದ್ದರೆ ಪಟಿಯಾಲಾದಲ್ಲಿ ಸೆಪ್ಟೆಂಬರ್ 17ರಿಂದ 30ರ ತನಕ ರ್ಯಾಲಿ ನಡೆಯಬೇಕಿದೆ.

ಇದನ್ನೂ ಓದಿ: ಸರಕಾರಿ ನಿವಾಸವನ್ನು 6 ವಾರಗಳೊಳಗೆ ತೆರವುಗೊಳಿಸುವಂತೆ ಸುಬ್ರಮಣಿಯನ್ ಸ್ವಾಮಿಗೆ ಕೋರ್ಟ್ ಸೂಚನೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News