×
Ad

ಫ್ರಾನ್ಸ್: ರಫೇಲ್ ಹಗರಣ ಆರೋಪದ ತನಿಖೆಗೆ ಹಿನ್ನಡೆ

Update: 2022-09-14 23:22 IST

ಹೊಸದಿಲ್ಲಿ, ಸೆ.15:  ಭಾರತಕ್ಕೆ ಫ್ರಾನ್ಸ್‌ನ 36 ರಫೇಲ್ ಫೈಟರ್ ಜೆಟ್‌ಗಳ ಮಾರಾಟದಲ್ಲಿ ನಡೆದಿದೆಯೆನ್ನಲಾದ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸುತ್ತಿರುವ  ಇಬ್ಬರು ಫ್ರೆಂಚ್ ನ್ಯಾಯಾಧೀಶರಿಗೆ ಮಿಲಿಟರಿ ಗೌಪ್ಯತೆಯ ಹೆಸರಿನಲ್ಲಿ ಮಾಹಿತಿಯನ್ನು ನೀಡಲು ಫ್ರೆಂಚ್ ಸರಕಾರ ನಿರಾಕರಿಸಿದೆ.  ಇದರಿಂದಾಗಿ ಈ ಹಗರಣದ ತನಿಖೆಗೆ ಹಿನ್ನಡೆಯುಂಟಾಗಿದೆ ಎಂದು ಮಿಡಿಯಾ ಪಾರ್ಟ್ ಎಂಬ ಫ್ರೆಂಚ್ ಮಾಧ್ಯಮ ಸಂಸ್ಥೆಯ ವರದಿ ಬಹಿರಂಗಪಡಿಸಿದೆ.

ನ್ಯಾಯಾಧೀಶರಾದ ವರ್ಜಿನಿ ಟಿಲ್‌ಮೊಂಟ್ ಹಾಗೂ ಪ್ಯಾಸ್ಕಲ್ ಗ್ಯಾಸ್ಟಿನೆವು ಅವರು ಕಳೆದ ಒಂದು ವರ್ಷದಿಂದ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದಾರೆ.  7.8 ಶತಕೋಟಿ ಯುರೋ ಡಾಲರ್ ಮೊತ್ತದ ಈ ಹಗರಣದಲ್ಲಿ ಭ್ರಷ್ಟಾಚಾರ, ಪ್ರಭಾವ ಹಾಗೂ ಸ್ವಜನಪಕ್ಷಪಾತ ನಡೆದಿದೆಯೆಂಬ ಆರೋಪಗಳ ಬಗ್ಗೆ ನ್ಯಾಯಾಧೀಶರಾದ ವರ್ಜಿನಿ ಟಿಲ್‌ಮೊಂಟ್ ಹಾಗೂ ಪ್ಯಾಸ್ಕಲ್ ಗಸ್ತಿನೆಯು ಅವರು ತನಿಖೆ ನಡೆಸಿದ್ದಾರೆ.

ಈ ವರ್ಷದ ಫೆಬ್ರವರಿಯಲ್ಲಿ ಫ್ರೆಂಚ್ ಪೊಲೀಸರ ಭ್ರಷ್ಟಾಚಾರ ವಿರೋಧ ಘಟಕ ಓಸಿಎಲ್‌ಸಿಐಎಫ್‌ಎಫ್, ಪ್ಯಾರಿಸ್‌ನ ಉಪನಗರ ಸೈಂಟ್ ಕ್ಲೌಡ್‌ನಲ್ಲಿರುವ ಡಸಾಲ್ಟ್ ಸಂಸ್ಥೆಯ ಮುಖ್ಯ ಕಾರ್ಯಾಲಯದಲ್ಲಿ ಶೋಧ ಕಾರ್ಯಾಚರಣೆ ನಡೆಸಿತ್ತು. ಈ ಬಗ್ಗೆ ಮೆಡಿಯಾಫಾರ್ಟ್ ಮಾಧ್ಯಮಸಂಸ್ಥೆಯು ಡಸ್ಸಾಲ್ಟ್ ಕಂಪೆನಿಯನ್ನು ಸಂಪರ್ಕಿಸಿದಾಗ ಅದು ಪ್ರತಿಕ್ರಿಯಿಸಲು ನಿರಾಕರಿಸಿರುವುದಾಗಿ ತಿಳಿದುಬಂದಿದೆ.

ಈ ವರ್ಷದ ಜೂನ್‌ನಲ್ಲಿ ಈ ಇಬ್ಬರು ನ್ಯಾಯಾಧೀಶರು, ತಮ್ಮ ತನಿಖೆಯ ಬಾಗವಾಗಿ ರಫೇಲ್ ಮಾರಾಟಕ್ಕೆ ಸಂಬಂದಿಸಿದ ಕೆಲವು ನಿರ್ದಿಷ್ಟ ರಹಸ್ಯ ದಾಖಲೆಪತ್ರಗಳನ್ನು ತಮಗೆ ನೀಡುವಂತೆ ಕೋರಿದಾಗ ಫ್ರಾನ್ಸ್‌ನ ಸಶಸ್ತ್ರ ಪಡೆಗಳು ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಅದಕ್ಕೆ ನಕಾರ ವ್ಯಕ್ತಪಡಿಸಿವೆಯೆಂದು ವರದಿ ಬಹಿರಂಗಪಡಿಸಿದೆ. ಸೇನಾ ಗೌಪ್ಯತೆಯ ಕಾರಣದಿಂದಾಗಿ ಅವುಗಳನ್ನು ನೀಡಲು ಸಾಧ್ಯವಿಲ್ಲವೆಂದು ಫ್ರಾನ್ಸ್ ಸರಕಾರವು ತನಿಕಾ ಆಯೋಗಕ್ಕೆ ತಿಳಿಸಿದೆಯೆಂದು ವರದಿ ಬಹಿರಂಗಪಡಿಸಿದೆ.

ಒಂದು ವೇಳೆ ನ್ಯಾಯಾಧೀಶರ ತನಿಖೆಯು ಯಾವುದೇ ಅಡೆತಡೆಯಿಲ್ಲದೆ ಮುಂದುವರಿದದ್ದೇ ಆದಲ್ಲಿ, ಈ ಬಹುಕೋಟಿ ಹಗರಣದಲ್ಲಿ 2015ರ ರಫೇಲ್ ಮಾರಾಟದ ಒಪ್ಪಂದದ ವೇಳೆ ಫ್ರಾನ್ಸ್‌ನ ಅಧ್ಯಕ್ಷರಾಗಿದ್ದ ಫ್ರಾಂಕೊಯಿಸ್ ಹಾಲೆಂಡ್, ಅವರ ಉತ್ತರಾಧಿಕಾರಿ ಎಮ್ಯಾನುಯೆಲ್ ಮ್ಯಾಕ್ರೊನ್ ಹಾಗೂ ಅವರ ಮಾಜಿ ಸಚಿವ ಜೀನ್-ಯೆಸ್ ಲೆ ಡ್ರಿಯಾನ್ ಅವರ ಪಾತ್ರದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಮೂಡಿಸುವ ಸಾಧ್ಯತೆಯಿದೆ ಎಂಬುದಾಗಿ ಮೆಡಿಯಾಪಾರ್ಟ್ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News