×
Ad

ಉತ್ತರಪ್ರದೇಶ: ನಿವಾಸಿಯೊಬ್ಬರು ರಸ್ತೆ ದುರವಸ್ಥೆ ಬಗ್ಗೆ ದೂರುತ್ತಿದ್ದಾಗಲೇ ಪಲ್ಟಿಯಾದ ಇ-ರಿಕ್ಷಾ!

Update: 2022-09-15 13:21 IST

ಉತ್ತರ ಪ್ರದೇಶ: ಉತ್ತರ ಪ್ರದೇಶದಲ್ಲಿನ ರಸ್ತೆಯ ದುರವಸ್ಥೆಯ ಬಗ್ಗೆ ನಿವಾಸಿಯೊಬ್ಬರು ದೃಶ್ಯ ಮಾಧ್ಯಮದ ಎದುರು ದೂರುತ್ತಿದ್ದಾಗಲೇ ಇ-ರಿಕ್ಷಾವೊಂದು ಪಲ್ಟಿಯಾಗಿದೆ. ಈ ಮೂಲಕ ಗುಂಡಿಗಳಿಂದ ಉಂಟಾಗುವ ಅಪಾಯವು ಲೈವ್ ಆಗಿ ಕಾಣಿಸಿಕೊಂಡಿದೆ.

ಬಲ್ಲಿಯಾ ನಿವಾಸಿ ಪ್ರವೀರ್ ಕುಮಾರ್, ರಸ್ತೆಯ ಹೊಂಡಗಳಿಂದಾಗುವ ಅಪಘಾತಗಳ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡುತ್ತಿದ್ದರು. ಅವರ ಹಿಂದೆಯೇ ಎಲೆಕ್ಟ್ರಿಕ್ ಇ-ರಿಕ್ಷಾ ನೀರು ತುಂಬಿದ ಗುಂಡಿಗೆ ಉರುಳಿಬಿದ್ದಿದೆ.

ಜನರು ರಿಕ್ಷಾದಲ್ಲಿದ್ದವರಿಗೆ ಸಹಾಯ ಮಾಡಲು ಧಾವಿಸಿದರು. ರಿಕ್ಷಾವನ್ನು ಸರಿಯಾಗಿ ನಿಲ್ಲಿಸಿದರು.  ಇಡೀ ಘಟನೆಯು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಪಘಾತದಲ್ಲಿ ಮಹಿಳೆಯೊಬ್ಬರು ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.

ಹಲವಾರು ಪ್ರಯತ್ನಗಳ ಹೊರತಾಗಿಯೂ ಕಳೆದ ನಾಲ್ಕು ವರ್ಷಗಳಿಂದ ರಸ್ತೆ ಹಾಳಾಗಿದೆ ಹಾಗೂ  ನಿರ್ಲಕ್ಷಿಸಲ್ಪಟ್ಟಿದೆ. ಈ ರೀತಿಯ ಆಟೋರಿಕ್ಷಾಗಳು ದಿನಕ್ಕೆ ಕನಿಷ್ಠ 20 ಬಾರಿ ಅಪಘಾತಕ್ಕೆ ಈಡಾಗುತ್ತಿವೆ ಎಂದು ಕುಮಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News