×
Ad

ಮಕ್ಕಳಿಗೆ ಶಾಲೆಯಲ್ಲಿ ಶಿಕ್ಷಕರೇ ಆದರ್ಶಪ್ರಾಯರು: ಡಾ.ಎಚ್.ಎಸ್.ಬಲ್ಲಾಳ್

Update: 2022-09-15 22:20 IST

ಮಣಿಪಾಲ, ಸೆ.15: ಮಕ್ಕಳಿಗೆ ಮನೆಯಲ್ಲಿ ಪಾಲಕರು ಆದರ್ಶಪ್ರಾಯ ರಾದರೆ ಶಾಲೆಯಲ್ಲಿ ಶಿಕ್ಷಕರೇ ಆದರ್ಶಪ್ರಾಯರಾಗಿರುತ್ತಾರೆ ಎಂದು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ ಸಹಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್ ಹೇಳಿದ್ದಾರೆ.

ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಮಣಿಪಾಲ ಇನ್ಸಿಟಿಟ್ಯೂಟ್ ಆಫ್ ಕಮ್ಯುನಿಕೇಶನ್ ಕ್ಯಾಂಪಸ್‌ನಲ್ಲಿರುವ ಸಮುದಾಯ ಬಾನುಲಿ ಕೇಂದ್ರ ರೇಡಿಯೋ ಮಣಿಪಾಲ್ ವತಿಯಿಂದ ಉಡುಪಿ ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಆನ್‌ಲೈನ್ ದೇಶಭಕ್ತಿಗೀತೆಗಳ ಸಮೂಹ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಿ ಅವರು ಮಾತನಾಡುತಿದ್ದರು.

ಈ ಸಂದರ್ಭದಲ್ಲಿ ಬೆಳ್ಳಿಹಬ್ಬದ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಮಣಿಪಾಲ್ ಇನ್ಸಿಟಿಟ್ಯೂಟ್ ಆಫ್ ಕಮ್ಯುನಿಕೇಶನ್ ಸವಿನೆನಪಿಗಾಗಿ ವಿದ್ಯಾರ್ಥಿಗಳಿಂದಲೇ ರಚಿಸಲ್ಪಟ್ಟ ಬೆಳ್ಳಿಹಬ್ಬದ ವಾರ್ಷಿಕೋತ್ಸವ ಲಾಂಛನ ವನ್ನು ಡಾ.ಎಚ್.ಎಸ್.ಬಲ್ಲಾಳ್ ಬಿಡುಗಡೆ ಮಾಡಿದರು. ದೇಶಭಕ್ತಿಗಳ ಸಮೂಹ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿ ಸಮೂಹ ಗಾಯನ ಮಾಡಿ ರಂಜಿಸಿದರು.

ಮಣಿಪಾಲ ಇನ್ಸಿಟಿಟ್ಯೂಟ್ ಆಏಫ್ ಕಮ್ಯುನಿಕೇಶನ್ ಪ್ರಾಧ್ಯಾಪಕಿ ಮತ್ತು ನಿರ್ದೇಶಕಿ ಡಾ.ಪದ್ಮಾರಾಣಿ, ಪ್ರಾಧ್ಯಾಪಕರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಲೆರಿಸ ಕಾರ್ಯಕ್ರಮ ನಿರೂಪಿಸಿದರು. ರೇಡಿಯೋ ಮಣಿಪಾಲ್‌ನ ಸಹಾಯಕ ಪ್ರಾಧ್ಯಾಪಕಿ ಮತ್ತು ಸಂಯೋಜಕಿ ಡಾ.ರಶ್ಮಿ ಅಮ್ಮೆಂಬಳ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News