ಆರ್ಥಿಕ ಮೀಸಲಾತಿ: ವರ್ಗರಹಿತ ಸಮಾಜ ನಿರ್ಮಾಣದ ಸಂವಿಧಾನದ ಧ್ಯೇಯಕ್ಕೆ ಎಸಗುವ ಅಪಮಾನ

Update: 2022-09-16 07:03 GMT

ಹೊಸದಿಲ್ಲಿ:  ಮುಂದುವರಿದ ಜಾತಿಗಳಲ್ಲಿನ ಆರ್ಥಿಕ ದುರ್ಬಲರಿಗೆ  (ಇಡಬ್ಲ್ಯುಎಸ್) ಸರಕಾರಿ ಕಚೇರಿಗಳು ಹಾಗೂ ಶಿಕ್ಷಣಸಂಸ್ಥೆಗಳಲ್ಲಿ ಶೇ.10 ಮೀಸಲಾತಿಯನ್ನು  ಒದಗಿಸುವುದು ಸಮಾನತೆಯ ಹಾಗೂ ವರ್ಗರಹಿತ ಸಮಾಜವನ್ನು ಸ್ಥಾಪಿಸುವ ಸಂವಿಧಾನದ ಧ್ಯೇಯಕ್ಕೆ  ಎಸಗುವ ಅಪಮಾನವಾಗಿದೆ ಎಂದು ಹಿರಿಯ ನ್ಯಾಯವಾದಿ ರವಿವರ್ಮ ಕುಮಾರ್ ಬುಧವಾರ ಸುಪ್ರೀಂ ಕೋರ್ಟ್ ನಲ್ಲಿ ವಾದಿಸಿದ್ದಾರೆ. ಮುಂದುವರಿದ ಜಾತಿಗಳ

ಆರ್ಥಿಕ ದುರ್ಬಲರಿಗೆ   ಶೇ.10ರಷ್ಟು ಮೀಸಲಾತಿ ಯನ್ನು ನೀಡುವ ಸಂವಿ ಧಾನದ ತಿದ್ದು ಪಡಿಯ ಸಿಂಧುತ್ವ ವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸುತ್ತಿರುವ ಭಾರತದ ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ ನೇತೃತ್ವದ ನ್ಯಾಯಪೀಠದ ಮುಂದೆ ಅವರು ಅರ್ಜಿದಾರರ ಪರವಾಗಿ ಬುಧವಾರ ವಾದಿಸಿದ ಸಂದರ್ಭ ಅವರು  ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಂವಿಧಾನದ 103ನೇ ತಿದ್ದುಪಡಿಯ ಮೂಲಕ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಶೇ.10ರ ಮೀಸಲಾತಿಯ ಪ್ರಯೋಜನ ಪಡೆಯುವುದರಿಂದ ಪರಿಶಿಷ್ಟಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರ ಹಿಂದುಳಿದ ವರ್ಗಗಳನ್ನು ಹೊರತುಪಡಿಸಿದೆ. ಇದರೊಂದಿಗೆ ಸರಕಾರವು ಹಿಂದುಳಿದ ವರ್ಗಗಳವರಿಗೆ ಅನ್ಯಾಯವೆಸಗಿದೆಯೆಂದು ಅವರು ಹೇಳಿದ್ದಾರೆ.

ಜಾತಿ ಆಧಾರಿತ ಮೀಸಲಾತಿಯು ಜಾತಿ ಹಾಗೂ ಧರ್ಮದ ಆಧಾರದಲ್ಲಿ ನಡೆಯುತ್ತಿರುವ ಶೋಷಣೆಗಳ ಸಂಕೋಲೆಗಳಿಂದ ಹಿಂದುಳಿದ ವರ್ಗಗಳವರನ್ನು ಮುಕ್ತಗೊಳಿಸುತ್ತದೆ. ಆದರೆ ತಮ್ಮನ್ನು ಎಸ್‌ಸಿ, ಎಸ್‌ಟಿ, ಒಬಿಸಿ ಎಂಬುದಾಗಿ ಗುರುತಿಸಿಕೊಳ್ಳದ ಜನರು ಕೂಡಾ ತಮ್ಮ ಜಾತಿಗಳ ಆಧಾರದಲ್ಲಿ ಗುರುತಿಸಿಕೊಳ್ಳುವಂತಹ ಪರಿಸ್ಥಿತಿಯನ್ನು ಇಡಬ್ಲ್ಯುಎಸ್ ಮೀಸಲಾತಿ ನೀತಿಯು ಸೃಷ್ಟಿಸುತ್ತದೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು.

ಕಾಸ್ಮೊಪಾಲಿಟನ್ ಬದುಕನ್ನು ಸಾಗಿಸುವಂತಹ ಜನರ ಸಂಖ್ಯೆಯು ಅಸಾಧಾರಣ ಸಂಖ್ಯೆಯಲ್ಲಿ ಹೆಚ್ಚುತ್ತಿದೆ. ಜಾತಿರಹಿತ ಸಮಾಜವು ನಮ್ಮ ಗುರಿಯಾಗಬೇಕಾಗಿದೆ. ನಾನು ಹುಟ್ಟಿದ ಜಾತಿ ಅಥವಾ ಧರ್ಮಕ್ಕೆ ಇಡಬ್ಲ್ಯುಎಸ್ ಮೀಸಲಾತಿಯು ಅಪಚಾರವೆಸಗುತ್ತದೆ. ಯಾಕೆಂದರೆ ನಾನು ಎಸ್‌ಸಿ/ಎಸ್‌ಟಿ ಅಥವಾ ಒಬಿಸಿ ಎಂದು ಪರಿಗಣಿಸಲ್ಪಡುವುದರಿಂದ ನನಗೆ ಶೇ.10ರ ಆರ್ಥಿಕ ಮೀಸಲಾತಿ ನೀತಿಯು ಅನ್ವಯವಾಗುವುದಿಲ್ಲ. ನನಗೆ ಈ ಮೀಸಲಾತಿಯಡಿ ಯಾವುದೇ ಪ್ರಯೋಜನವನ್ನು ಪಡೆಯಲು ಸಾಧ್ಯವಿಲ್ಲ ಎಂದು ರವಿ ಕುಮಾರ್ ವರ್ಮ ವಾದಿಸಿದರು. ತಮ್ಮ ಜಾತಿ, ಧರ್ಮದಿಂದ ಗುರುತಿಸಿಕೊಳ್ಳುವುದನ್ನು ನಿಲ್ಲಿಸಿರುವ ಅತ್ಯಂತ ಸುಧಾರಿತ ಜನರೀಗ ಇದ್ದಾರೆ. ಸಮಾನ ಅವಕಾಶಗಳನ್ನು ಪಡೆಯಲು ಇವರಿಗಿರುವ ಹಕ್ಕುಗಳನ್ನು ನಿರಾಕರಿಸಬೇಕೇ ಎಂದು ನ್ಯಾಯವಾದಿ ರವಿಕುಮಾರ್ ವರ್ಮ ಅವರು ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ, ಎಸ್.ರವೀಂದ್ರ ಭಟ್, ಬೇಲಾ ಎಂ. ತ್ರಿವೇದಿ ಹಾಗೂ ಜೆ.ಬಿ. ಪರ್ದಿವಾಲಾ ಅವರೂ ಕೂಡಾ ಒಳಗೊಂಡಿರುವ ನ್ಯಾಯಪೀಠವನ್ನು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News