ಉಕ್ರೇನ್‌ನಿಂದ ಮರಳಿದ ವಿದ್ಯಾರ್ಥಿಗಳಿಗೆ ಭಾರತೀಯ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಾತಿ ಅಸಾಧ್ಯ: ಕೇಂದ್ರ ಸರಕಾರ

Update: 2022-09-16 12:06 GMT
Photo: PTI

ಹೊಸದಿಲ್ಲಿ: ಉಕ್ರೇನ್‌(Ukraine) ಮೇಲೆ ರಶ್ಯ ಆಕ್ರಮಣದ ನಂತರ ಅಲ್ಲಿನ ಬಿಕ್ಕಟ್ಟಿನ ಪರಿಸ್ಥಿತಿಯ ನಡುವೆ ಸ್ವದೇಶಕ್ಕೆ ವಾಪಸಾಗಿದ್ದ ಅಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ ನೂರಾರು ವಿದ್ಯಾರ್ಥಿಗಳನ್ನು ದೇಶದ ಶಿಕ್ಷಣ ಸಂಸ್ಥೆಗಳಲ್ಲಿ ದಾಖಲಿಸಿಕೊಳ್ಳಲು ಪ್ರಸಕ್ತ ಇರುವ ಕಾನೂನು ಅನುಮತಿಸುವುದಿಲ್ಲ ಎಂದು ಕೇಂದ್ರ ಸರಕಾರ ಗುರುವಾರ ಸುಪ್ರೀಂ ಕೋರ್ಟಿಗೆ ತಿಳಿಸಿದೆ.

ಇಲ್ಲಿಯ ತನಕ ರಾಷ್ಟ್ರೀಯ ವೈದ್ಯಕೀಯ ಆಯೋಗವು ವಿದೇಶದಲ್ಲಿ ಶಿಕ್ಷಣ ಮೊಟಕುಗೊಳಿಸಿ ವಾಪಸಾದ ಯಾವುದೇ ವೈದ್ಯಕೀಯ ವಿದ್ಯಾರ್ಥಿಗೆ(medical students) ಭಾರತೀಯ ವೈದ್ಯಕೀಯ ಸಂಸ್ಥೆಗಳಲ್ಲಿ ಪ್ರವೇಶಾತಿ ಪಡೆಯಲು ರಾಷ್ಟ್ರೀಯ ವೈದ್ಯಕೀಯ ಆಯೋಗ ಇಲ್ಲಿಯ ತನಕ ಅನುಮತಿ ನೀಡಿಲ್ಲ ಎಂದು ಸುಪ್ರೀಂ ಕೋರ್ಟಿಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಕೇಂದ್ರ ಹೇಳಿದೆ.

ಉಕ್ರೇನ್‌ನಿಂದ ವಾಪಸಾದ ಹಲವು ವೈದ್ಯಕೀಯ ವಿದ್ಯಾರ್ಥಿಗಳು ಸಲ್ಲಿಸಿರುವ ಅರ್ಜಿಗಳಿಗೆ ಪ್ರತಿಕ್ರಿಯೆಯಾಗಿ ಕೇಂದ್ರ ತನ್ನ ಅಫಿಡವಿಟ್‌ ಸಲ್ಲಿಸಿದೆ.

ಆದರೂ ಉಕ್ರೇನ್‌ನಿಂದ ವಾಪಸಾದ ಎಂಬಿಬಿಎಸ್‌ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ವಿದೇಶಾಂಗ ಸಚಿವಾಲಯದೊಂದಿಗೆ ಚರ್ಚೆಯ ನಂತರ ರಾಷ್ಟ್ರೀಯ  ವೈದ್ಯಕೀಯ ಆಯೋಗವು ಸೆಪ್ಟೆಂಬರ್‌ 6, 2022 ರಂದು ನೋಟಿಸ್‌ ಜಾರಿಗೊಳಿಸಿ ಉಕ್ರೇನ್‌ನಲ್ಲಿನ ಅವರ ಮಾತೃ ಶಿಕ್ಷಣ ಸಂಸ್ಥೆಯ ಅನುಮತಿಯೊಂದಿಗೆ ಬೇರೆ ವಿದೇಶಿ ವಿವಿಗಳಲ್ಲಿ ಅವರ ಬಾಕಿ ಕೋರ್ಸ್‌ ಪೂರ್ಣಗೊಳಿಸಲು ಒಪ್ಪುವುದಾಗಿ ಹಾಗೂ ಈ ರೀತಿ ಕೋರ್ಸ್‌ ಪೂರ್ಣಗೊಳಿಸಿದವರಿಗೆ ಅವರ ಉಕ್ರೇನ್‌ ಸಂಸ್ಥೆಯೇ ಪದವಿ ಪ್ರಮಾಣ ಪತ್ರ ನೀಡಬೇಕೆಂದು ನಿರೀಕ್ಷಿಸುವುದಾಗಿ ಹೇಳಿದ್ದನ್ನೂ ಕೇಂದ್ರ ತನ್ನ ಅಫಿಡವಿಟ್‌ನಲ್ಲಿ ಉಲ್ಲೇಖಿಸಿದೆ.

ಇದನ್ನೂ ಓದಿ: ಬೇಷರತ್ ಕ್ಷಮೆಯಾಚನೆಗೆ ಆಗ್ರಹಿಸಿ ಶೆಹ್ಲಾ ರಶೀದ್‌ರ ಅರ್ಜಿಗೆ ಉತ್ತರಿಸಿ: ಝೀ ನ್ಯೂಸ್‌ಗೆ ಕೋರ್ಟ್ ನಿರ್ದೇಶ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News