ಗಾಂಜಾ ಸೇವನೆ: ಆರು ಮಂದಿ ವಶಕ್ಕೆ
Update: 2022-09-16 20:43 IST
ಉಡುಪಿ, ಸೆ.16: ಗಾಂಜಾ ಸೇವನೆಗೆ ಸಂಬಂಧಿಸಿ ಸೆ.15ರಂದು ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ತ್ರಾಸಿ ಬೀಚ್ ಬಳಿಯ ಪಾರ್ಕ್‌ನಲ್ಲಿ ಹರ್ಷ (23) ಹಾಗೂ ಅವಿನಾಶ್(24) ಮತ್ತು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮೂಡ್ಲಕಟ್ಟೆ ರೈಲ್ವೆ ನಿಲ್ದಾಣದ ಬಳಿ ಮದನ್ ಕುಮಾರ್ (36), ಮೂಡ್ಲಕಟ್ಟೆ ಕಾಲೇಜು ಬಳಿ ಭೀಮ್ ಸಿಂಗ್ ಹಾಗೂ ಖುಷಿ ರಾಮ್, ಸೆ.14ರಂದು ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಹೂಡೆ ಜಂಕ್ಷನ್ ಬಳಿ ಮೊಹಮ್ಮದ್ ಸಮೀರ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಾಗಿದೆ.