ಕಾಸರಗೋಡು: ಬೀದಿ ನಾಯಿಗಳಿಂದ ಮಕ್ಕಳನ್ನು ರಕ್ಷಿಸಲು ಏರ್‌ ಗನ್‌ ಹಿಡಿದ ವ್ಯಕ್ತಿ ವಿರುದ್ಧ ಪ್ರಕರಣ

Update: 2022-09-17 11:31 GMT
Photo: Twitter/@TOI_Trivandrum

ಕಾಸರಗೋಡು(Kasaragod): ಬೀದಿ ನಾಯಿಗಳ ಉಪಟಳ ತಾಳಲಾರದೆ ಮದರಸಾಗೆ ತೆರಳಲು ಭಯಪಡುತ್ತಿದ್ದ ತನ್ನ ಪುತ್ರಿ ಹಾಗೂ ನೆರೆಹೊರೆಯ ಮಕ್ಕಳಿಗೆ ಭದ್ರತೆ ಒದಗಿಸುವ ಸಲುವಾಗಿ ಏರ್‌ ಗನ್‌ ಹಿಡಿದುಕೊಂಡು ಮಕ್ಕಳನ್ನು ಮದರಸಾಗೆ ಕರೆದುಕೊಂಡು ಹೋದ ಬೇಕಲದ ಹದ್ದಾದ್‌ ನಗರ ನಿವಾಸಿ ಸಮೀರ್‌ ಎಂಬವರ ವಿರುದ್ಧ ಇದೀಗ ಐಪಿಸಿ ಸೆಕ್ಷನ್‌ 153 ಅನ್ವಯ ಪ್ರಕರಣ ದಾಖಲಾಗಿದೆ. ಹಿಂಸೆ ಉಂಟು ಮಾಡುವ ಉದ್ದೇಶದಿಂದ ಪ್ರಚೋದನೆಯ ಆರೋಪವನ್ನು ಅವರ ಮೇಲೆ ಹೊರಿಸಲಾಗಿದೆ ಎಂದು onmanorama ವರದಿ ಮಾಡಿದೆ.

ಬೀದಿ ನಾಯಿಗಳ ವಿರುದ್ಧ ದಾಳಿ ನಡೆಸಲು ಸಮೀರ್‌ ತಮ್ಮ ಕೃತ್ಯದಿಂದ ಜನರನ್ನು ಉತ್ತೇಜಿಸಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.

ಆದರೆ ತಮ್ಮ ಬಳಿ ಬೇರೆ ದಾರಿಯಿರಲಿಲ್ಲ, ಮಕ್ಕಳು ಶಾಲೆಗೆ ಹೋಗಲು ಭಯ ಪಡುವಂತಹ ವಾತಾವರಣವಿದೆ ಎಂದು ಸಮೀರ್‌ ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾರೆ.

ತಮ್ಮ ಬಳಿಯಿರುವ ಏರ್‌ ಗನ್‌ಗೆ ಲೈಸನ್ಸ್‌ ಬೇಕಿಲ್ಲ, ಹಾಗೂ ತಮ್ಮ ಬಳಿ ಬಹಳ ಸಮಯದಿಂದ ಅದು ಇದೆ, ಮೇಲಾಗಿ ಏರ್‌ ಗನ್‌ ನಾಯಿಗೆ ಗಾಯವುಂಟು ಮಾಡಬಹುದೇ ಹೊರತು ಅದನ್ನು ಕೊಲ್ಲುವುದಿಲ್ಲ ಎಂದು ಅವರು ಹೇಳಿದ್ದಾರೆ.

2016ರಲ್ಲಿ ಒಮ್ಮೆ ಇಂತಹುದೇ ಸಮಸ್ಯೆ ಕೇರಳದಲ್ಲಿ  ಉದ್ಭವಿಸಿದಾಗ, ಅಲ್ಲಿನ ಕೆಲ ಗುಂಪುಗಳು ಜನರಿಗೆ ಅಗ್ಗದ ಬೆಲೆಯ ಏರ್‌ ಗನ್‌ಗಳನ್ನು ವಿತರಿಸಿದ್ದವು. ಆದರೆ ಆಗ ಮಧ್ಯಪ್ರವೇಶಿಸಿದ್ದ ಸುಪ್ರೀಂ ಕೋರ್ಟ್‌ ಮನುಷ್ಯನ ಜೀವನ ಪ್ರಾಣಿಯ ಜೀವಕ್ಕಿಂತ ಶ್ರೇಷ್ಠವಲ್ಲ ಎಂದು ಹೇಳಿತ್ತು ಎಂದು ವರದಿಯಾಗಿದೆ.

ಇದನ್ನೂ ಓದಿ: ಜಾಮಿಯಾ ಮಿಲ್ಲಿಯಾ ಪ್ರವೇಶಿಸದಂತೆ ಸಫೂರಾ ಝರ್ಗರ್ ಗೆ ನಿರ್ಬಂಧ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News