ನ್ಯಾಯಾಲಯದ ಸಮಯವನ್ನು ವ್ಯರ್ಥ ಮಾಡಬೇಡಿ, ಇದರಿಂದ ಬೊಕ್ಕಸಕ್ಕೆ ಖರ್ಚು: ನ್ಯಾ. ಚಂದ್ರಚೂಡ್‌

Update: 2022-09-17 16:55 GMT
ನ್ಯಾ. ಚಂದ್ರಚೂಡ್‌

ಹೊಸದಿಲ್ಲಿ: ಈ ನ್ಯಾಯಾಲಯದ (ಸುಪ್ರೀಂ ಕೋರ್ಟ್‌) ಪ್ರತಿ ನಿಮಿಷಕ್ಕೂ ಖಜಾನೆಯಿಂದ ಹಣ ಖರ್ಚಾಗುತ್ತದೆ, ಹಾಗಾಗಿ ಯಾವುದೇ ಕ್ಷುಲ್ಲಕ ಪ್ರಕರಣಗಳನ್ನು ಸುಪ್ರೀಂಕೋರ್ಟ್(Supreme Court) ಪರಿಗಣಿಸುವುದಿಲ್ಲ ಎಂದು ನ್ಯಾಯಮೂರ್ತಿ ಡಿವೈ ಚಂದ್ರಚೂಡ್(Justice Chandrachud) ಹೇಳಿದ್ದಾರೆ.

“ಇದು ಸಂಪೂರ್ಣ ಕ್ಷುಲ್ಲಕ ಪ್ರಕರಣ. ಈ ಮನವಿಯನ್ನು ಅಂಗೀಕರಿಸಲು ಸಾಧ್ಯವಿಲ್ಲ. ನೀವು ಇತರ ಸಲಹೆಗಾರರ ಸಮಯವನ್ನು ತೆಗೆದುಕೊಳ್ಳುತ್ತಿದ್ದೀರಿ. ನೀವು ಹೀಗೇ ಮುಂದುವರಿದರೆ ನೀವು ಭಾರೀ ಬೆಲೆ ತೆರಬೇಕಾಗುತ್ತದೆ, ”ಎಂದು ನ್ಯಾಯಮೂರ್ತಿ ಚಂದ್ರಚೂಡ್ ಅವರು ತಮ್ಮ ಮನವಿಯನ್ನು ಹಿಂತೆಗೆದುಕೊಳ್ಳುವಂತೆ ಅರ್ಜಿದಾರರಿಗೆ ಹೇಳಿದ್ದಾರೆ.

"ನಮ್ಮ ಸಮಯದ ಪ್ರತಿ ನಿಮಿಷವೂ ಬೊಕ್ಕಸಕ್ಕೆ ಹಣ ಖರ್ಚಾಗುತ್ತದೆ, ಈ ಸಮಯವನ್ನು ನಿಷ್ಪ್ರಯೋಜಕವಾಗಿ ಬಳಸಿದರೆ ವೆಚ್ಚವನ್ನು ವಿಧಿಸಬೇಕು" ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನಿರಾಕರಿಸುವಾಗ ಹೇಳಿದ್ದಾರೆ.

ರಾಜ್ಯಪಾಲರು ನೀಡಿದ ಕೆಲವು ಹೇಳಿಕೆಗಳನ್ನು ಮತ್ತು ಗೃಹ ಸಚಿವಾಲಯವು ಅದರ ಮೇಲೆ ಕ್ರಮ ಕೈಗೊಂಡಿದ್ದರ ವಿರುದ್ಧ ಕೋ ವಾರೆಂಟೊ ಕೋರಿ ಸಲ್ಲಿಸಲಾದ ಪಿಐಎಲ್ ಅರ್ಜಿಯ ವಿಚಾರಣೆಯ‌ ನಡುವೆ ನ್ಯಾಯಮೂರ್ತಿ ಹೀಗೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News