ರಾಣಿ ಎಲಿಝಬೆತ್ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಲಂಡನ್ ತಲುಪಿದ ರಾಷ್ಟ್ರಪತಿ ದ್ರೌಪದಿ ಮುರ್ಮು

Update: 2022-09-18 06:17 GMT
photo- @rashtrapatibhvn

ಲಂಡನ್:  ರಾಣಿ ಎಲಿಝಬೆತ್ II ಅವರ ಸರಕಾರಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಹಾಗೂ  ಭಾರತ ಸರಕಾರದ ಪರವಾಗಿ ಸಂತಾಪ ಸೂಚಿಸಲು ರಾಷ್ಟ್ರಪತಿ ದ್ರೌಪದಿ ಮುರ್ಮು (President Droupadi Murmu)ಶನಿವಾರ ಸಂಜೆ ಲಂಡನ್‌ಗೆ ಆಗಮಿಸಿದರು.

ಸೆಪ್ಟೆಂಬರ್ 8 ರಂದು ಸ್ಕಾಟ್ಲೆಂಡ್‌ನ ತಮ್ಮ  ನಿವಾಸದಲ್ಲಿ 96 ನೇ ವಯಸ್ಸಿನಲ್ಲಿ ನಿಧನರಾದ ರಾಣಿ ಎಲಿಝಬೆತ್ II ಅವರ ಅಂತ್ಯಕ್ರಿಯೆಯನ್ನು   ಸೆಪ್ಟೆಂಬರ್ 19 ರ ಬೆಳಿಗ್ಗೆ ವೆಸ್ಟ್‌ಮಿನ್‌ಸ್ಟರ್ ಅಬ್ಬೆಯಲ್ಲಿ ನೆರವೇರಿಸಲಾಗುತ್ತದೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬ್ರಿಟನ್ ಗೆ ಮೂರು ದಿನಗಳ ಭೇಟಿಯಲ್ಲಿದ್ದಾರೆ.  ಈ ಸಮಯದಲ್ಲಿ ಅವರು ಸೋಮವಾರದ ರಾಣಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಾರೆ ಹಾಗೂ ರವಿವಾರ ಸಂಜೆ ಕಿಂಗ್ ಚಾರ್ಲ್ಸ್ III ಅವರು ಬಕಿಂಗ್ಹ್ಯಾಮ್ ಅರಮನೆಯಲ್ಲಿ ಆಯೋಜಿಸಲಾದ ವಿಶ್ವ ನಾಯಕರ ಸ್ವಾಗತ ಸಮಾರಂಭಕ್ಕೂ ಮುರ್ಮು ಅವರಿಗೆ  ಆಮಂತ್ರಣ ನೀಡಲಾಗಿದೆ.

" ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು  ರಾಣಿ ಎಲಿಝಬೆತ್ II ರ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಲು ಹಾಗೂ  ಭಾರತ ಸರಕಾರದ ಪರವಾಗಿ ಸಂತಾಪ ಸೂಚಿಸಲು ಯುನೈಟೆಡ್ ಕಿಂಗ್‌ಡಮ್ ನ ಲಂಡನ್‌ಗೆ ತೆರಳಿದ್ದಾರೆ" ಎಂದು ವಿಮಾನವು ದಿಲ್ಲಿಯಿಂದ ಹೊರಡುತ್ತಿದ್ದಂತೆ ರಾಷ್ಟ್ರಪತಿ ಭವನ ಟ್ವೀಟ್ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News