ಕಾಶ್ಮೀರಿ ಪಂಡಿತರ ವಲಸೆ, ಹತ್ಯೆಗಳ ತನಿಖೆ ಕೋರಿ ಸಲ್ಲಿಸಲಾದ ಮನವಿ ತಿರಸ್ಕರಿಸಿದ ಸುಪ್ರೀಂಕೋರ್ಟ್

Update: 2022-09-19 07:12 GMT
Photo:PTI

ಹೊಸದಿಲ್ಲಿ: ಕಾಶ್ಮೀರಿ ಪಂಡಿತರ ವಲಸೆ ಮತ್ತು ಹತ್ಯೆಗಳ ತನಿಖೆಯನ್ನು ಕೋರಿ ಸಲ್ಲಿಸಲಾದ ಮನವಿಯನ್ನು ಸುಪ್ರೀಂ ಕೋರ್ಟ್ (Supreme Court)ಸೋಮವಾರ ತಿರಸ್ಕರಿಸಿದೆ ಎಂದು Bar and Bench  ವರದಿ ಮಾಡಿದೆ.

ಅರ್ಜಿದಾರರಿಗೆ ಮನವಿಯನ್ನು ಹಿಂಪಡೆಯಲು ಮತ್ತು ಸೂಕ್ತ ಪರಿಹಾರವನ್ನು ಪಡೆಯಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.

 ಜೆಕೆಎಲ್‌ಎಫ್ ಉಗ್ರಗಾಮಿಗಳಿಂದ ಕೊಲ್ಲಲ್ಪಟ್ಟ ಟಿಕಾ ಲಾಲ್ ಟಪ್ಲೂ ಎಂಬುವವರ ಪುತ್ರ ಅಶುತೋಷ್ ಟಪ್ಲೂ ಈ ಅರ್ಜಿಯನ್ನು ಸಲ್ಲಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರಿದ್ದ ಪೀಠ, “ಈ ಅರ್ಜಿ ವಿಚಾರಣೆ ನಡೆಸಲು ನಮಗೆ ಇಷ್ಟವಿಲ್ಲ. ಇದೇ ರೀತಿಯ ಅರ್ಜಿಗಳನ್ನು ಈ ಹಿಂದೆ ವಜಾಗೊಳಿಸಲಾಗಿದೆ" ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News