ದಿಲ್ಲಿಯ ಬಳಿಕ ಪಂಜಾಬ್ ನಲ್ಲೂ ಬಹುಮತದ ಸಾಬೀತಿಗೆ ಮುಂದಾದ ಆಪ್
Update: 2022-09-19 14:57 IST
ಹೊಸದಿಲ್ಲಿ: ರಾಷ್ಟ್ರರಾಜಧಾನಿ ದಿಲ್ಲಿಯ ನಂತರ ಪಂಜಾಬ್‌ನಲ್ಲೂ ಎಲ್ಲಾ ಶಾಸಕರು ಪಕ್ಷದೊಂದಿಗೆ ಇದ್ದಾರೆ ಎಂದು ಸಾಬೀತುಪಡಿಸಲು ಆಮ್ ಆದ್ಮಿ ಪಕ್ಷ (AAP government)ಬಹುಮತದ ಪರೀಕ್ಷೆಯನ್ನು ನಡೆಸಲು ಮುಂದಾಗಿದೆ ಎಂದು NDTV ವರದಿ ಮಾಡಿದೆ.
ಬಿಜೆಪಿ ಪಕ್ಷವು ತನ್ನ ಶಾಸಕರನ್ನು ತನ್ನತ್ತ ಸೆಳೆಯಲು ಆಮಿಷವೊಡ್ಡುತ್ತಿದೆ ಎಂದು ದಿಲ್ಲಿಯಲ್ಲಿ ಆರೋಪಿಸಿದ್ದ ಆಪ್ ಸದನದಲ್ಲಿ ತನ್ನ ಬಹುಮತ ಸಾಬೀತುಪಡಿಸಿತ್ತು. ಪಂಜಾಬ್ ನಲ್ಲೂ ಬಿಜೆಪಿ ತನ್ನ ಶಾಸಕರನ್ನು ಖರೀದಿಸಲು ಯತ್ನಿಸುತ್ತಿದೆ ಎಂದು ಇತ್ತೀಚೆಗೆ ಆಪ್ ಆರೋಪಿಸಿತ್ತು.