×
Ad

11 ಆರೋಪಿಗಳಿಗೆ ನೀಡಿದ್ದ ಜಾಮೀನು ರದ್ದುಗೊಳಿಸಿದ್ದ ಕೆಳ ನ್ಯಾಯಾಲಯದ ತೀರ್ಪಿಗೆ ಕೇರಳ ಹೈಕೋರ್ಟ್ ಅಸ್ತು

Update: 2022-09-19 21:52 IST

ಕೊಚ್ಚಿ,ಸೆ.19: ಅಟ್ಟಪ್ಪಾಡಿಯ ಆದಿವಾಸಿ ವ್ಯಕ್ತಿಯ ಹತ್ಯೆ ಪ್ರಕರಣದಲ್ಲಿ 11 ಆರೋಪಿಗಳಿಗೆ ನೀಡಲಾಗಿದ್ದ ಜಾಮೀನನ್ನು ರದ್ದುಗೊಳಿಸಿದ್ದ ಮನ್ನಾರ್‌ಕಾಡ್‌ನ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆ ವಿಶೇಷ ನ್ಯಾಯಾಲಯದ ಆದೇಶವನ್ನು ಕೇರಳ ಉಚ್ಚ ನ್ಯಾಯಾಲಯವು ಸೋಮವಾರ ಎತ್ತಿ ಹಿಡಿದಿದೆ. 2018,ಫೆಬ್ರವರಿಯಲ್ಲಿ ಅಟ್ಟಪ್ಪಾಡಿಯಲ್ಲಿ ಮಧು (27) ಎಂಬ ಆದಿವಾಸಿಯನ್ನು ಗುಂಪೊಂದು ಥಳಿಸಿ ಹತ್ಯೆ ಮಾಡಿತ್ತು.

ಆದಾಗ್ಯೂ,ಪ್ರಕರಣದಲ್ಲಿ 11ನೇ ಆರೋಪಿ ಶಮಸುದ್ದೀನ್‌ಗೆ ನೀಡಿದ್ದ ಜಾಮೀನನ್ನು ರದ್ದುಗೊಳಿಸಿದ್ದ ಆದೇಶವನ್ನು ಉಚ್ಚ ನ್ಯಾಯಾಲಯವು ತಳ್ಳಿ ಹಾಕಿದೆ.

ಆರೋಪಿಗಳಾದ ಪಾಲಕ್ಕಾಡ್ ಕಲ್ಲಮಲ ನಿವಾಸಿಗಳಾದ ಮರಕ್ಕರ್,ಅನೀಶ,ಬಿಜು ಮತ್ತು ಸಿದ್ದಿಕ್ ಹಾಗೂ ಇತರರು ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾ.ಕೌಸರ್ ಎಡಪ್ಪಗತ್ ಅವರು ಈ ಆದೇಶವನ್ನು ಹೊರಡಿಸಿದರು.

ಪ್ರಕರಣದ ಒಟ್ಟು 16 ಆರೋಪಿಗಳ ಪೈಕಿ 12 ಜನರು ಜಾಮೀನು ಪಡೆದುಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News