ಶುಲ್ಕ ಏರಿಕೆ : ಅಲಹಾಬಾದ್ ವಿ.ವಿ.ಯಲ್ಲಿ ಮುಂದುವರಿದ ಪ್ರತಿಭಟನೆ

Update: 2022-09-19 18:12 GMT

ಅಲಹಾಬಾದ್, ಸೆ. 19: 2022-23 ಶೈಕ್ಷಣಿಕ ವರ್ಷದ ವಿವಿಧ ಕೋರ್ಸ್‌ಗಳ ಶುಲ್ಕ ಏರಿಕೆ ಮಾಡಿರುವ ಅಲಹಾಬಾದ್ ವಿಶ್ವವಿದ್ಯಾನಿಲಯದ ಆಡಳಿತ  ಮಂಡಳಿಯ ನಿರ್ಧಾರದ ವಿರುದ್ಧದ ಪ್ರತಿಭಟನೆಯನ್ನು ವಿದ್ಯಾರ್ಥಿಗಳು  ಸೋಮವಾರ ಕೂಡ ಮುಂದುವರಿಸಿದ್ದಾರೆ.

ಶುಲ್ಕ ಏರಿಕೆ ವಿರುದ್ಧ ವಿದ್ಯಾರ್ಥಿಗಳು ಕಳೆದ ಒಂದು ವಾರಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಸೆಪ್ಟಂಬರ್ 15ರಂದು ವಿದ್ಯಾರ್ಥಿಗಳು ಪಂಜಿನ ಮೆರವಣಿಗೆ ನಡೆಸಿದ್ದರು ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದ್ದರು.

ಪದವಿ ಕೋರ್ಸ್‌ಗಳ ಶುಲ್ಕವನ್ನು ಸುಮಾರು ಶೇ. 400ಕ್ಕೆ ಏರಿಕೆ ಮಾಡಲಾಗಿದೆ ಎಂದು ಛಾತ್ರಸಂಘ ಸಂಯುಕ್ತ ಸಂಘರ್ಷ ಸಮಿತಿಯ ಅಡಿಯ ವಿದ್ಯಾರ್ಥಿಗಳ ಗುಂಪೊಂದು ಹೇಳಿದೆ.ಈ ನಡುವೆ ಪ್ರತಿಭಟನೆ ಸಂದರ್ಭ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾದ ಆದರ್ಶ್ ಬಧುರಿಯಾ ಆತ್ಮಾಹುತಿಗೆ ಪ್ರಯತ್ನಿಸಿದ್ದಾರೆ. ಶುಲ್ಕ ಏರಿಕೆ ಮಾಡುವ ನಿರ್ಧಾರವನ್ನು ಅಲಹಾಬಾದ್ ಉಚ್ಚ ನ್ಯಾಯಾಲಯದ ಕಾರ್ಯಕಾರಿ ಮಂಡಳಿ ಆಗಸ್ಟ್ 31ರಂದು ತೆಗೆದುಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News