3 ತಿಂಗಳು ವೇತನ ರಹಿತ ರಜೆಯಲ್ಲಿ ತೆರಳುವಂತೆ 80 ಪೈಲಟ್‌ಗಳಿಗೆ ಸೂಚಿಸಿದ ಸ್ಪೈಸ್ ಜೆಟ್
Update: 2022-09-20 23:43 IST
ಹೊಸದಿಲ್ಲಿ, ಸೆ. 20: ಮೂರು ತಿಂಗಳು ವೇತನ ರಹಿತ ರಜೆಯಲ್ಲಿ ತೆರಳುವಂತೆ ಸ್ಪೈಸ್ ಜೆಟ್ ಮಂಗಳವಾರ ತನ್ನ ಪೈಲಟ್‌ಗಳಿಗೆ ಸೂಚಿಸಿದೆ.
ಇದು ವೆಚ್ಚವನ್ನು ಕಡಿತಗೊಳಿಸುವ ತಾತ್ಕಾಲಿಕ ಕ್ರಮವಾಗಿದೆ ಎಂದು ಗುರುಗಾಂವ್‌ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಸ್ಪೈಸ್ ಜೆಟ್ ಹೇಳಿದೆ.
ವೇತನ ರಹಿತ ರಜೆಯಲ್ಲಿ ಬಲವಂತವಾಗಿ ಕಳುಹಿಸುತ್ತಿರುವ ಪೈಲಟ್‌ಗಳು ಏರ್‌ಲೈನ್ಸ್‌ನ ಬೋಯಿಂಗ್ ಹಾಗೂ ಬಂಬೋರ್ಡಿರ್ ವಿಮಾನಕ್ಕೆ ಸೇರಿದವರು.
ಏರ್‌ಲೈನ್ಸ್‌ನ ಆರ್ಥಿಕ ಬಿಕ್ಕಟ್ಟು ನಮಗೆ ತಿಳಿದಿತ್ತು. ಆದರೆ, ದಿಢೀರ್ ನಿರ್ಧಾರ ನಮ್ಮಲ್ಲಿ ಅನೇಕರನ್ನು ಬೆಚ್ಚಿ ಬೀಳಿಸಿದೆ. ಮೂರು ತಿಂಗಳ ನಂತರ ಕೂಡ ಕಂಪೆನಿಯ ಆರ್ಥಿಕ ಸ್ಥಿತಿಯ ಬಗ್ಗೆ ಅನಿಶ್ಚಿತತೆ ಇದೆ.ಬಲವಂತವಾಗಿ ರಜೆಯ ಮೇಲೆ ಕಳುಹಿಸುವವರನ್ನು ಪಾಪಸ್ ಕರೆಸುವ ಯಾವುದೇ ಭರವಸೆ ಇಲ್ಲ ಎಂದು ಪೈಲಟ್‌ಗಳು ಹೇಳಿದ್ದಾರೆ.