ಪ್ರೇಮ ಸಂಬಂಧ ಶಂಕೆ; ಮಹಿಳೆಯನ್ನು ಕೊಲೆಗೈದ ಆರೋಪದಲ್ಲಿ ಓರ್ವ ಸೆರೆ

Update: 2022-09-21 04:05 GMT

ಗಾಝಿಯಾಬಾದ್:  ಬೇರೊಬ್ಬ ವ್ಯಕ್ತಿಯ ಜತೆ ಪ್ರೇಮಸಂಬಂಧ ಹೊಂದಿದ ಅನುಮಾನದಿಂದ ವ್ಯಕ್ತಿಯೊಬ್ಬ ತನ್ನ ಪ್ರಿಯತಮೆ ಎಂದು ಹೇಳಲಾದ ಮಹಿಳೆಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ನಂದ ಗ್ರಾಮ್‍ನಲ್ಲಿ ಬೆಳಕಿಗೆ ಬಂದಿದೆ.

ಒಬ್ಬಂಟಿಯಾಗಿ ವಾಸವಿದ್ದ ಸುಮನ್ ಅಲಿಯಾಸ್ ಆಶಾ (35) ಎಂಬಾಕೆ ಕೊಲೆಯಾದ ಮಹಿಳೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ನದೀಮ್ ಎಂದು ಗುರುತಿಸಲಾಗಿದ್ದು, ತಪ್ಪೊಪ್ಪಿಕೊಂಡಿದ್ದಾನೆ ಎಂದು ನಗರ ಎಸ್ಪಿ ನಿಪುಣ್ ಅಗರ್‍ವಾಲ್ ಹೇಳಿದ್ದಾರೆ.

ಪ್ರಿಯತಮೆಯ ಮನೆಬಾಡಿಗೆ ಸೇರಿದಂತೆ ಎಲ್ಲ ಖರ್ಚುಗಳನ್ನು ತಾನೇ ಭರಿಸುತ್ತಿದ್ದುದಾಗಿ ವಿಚಾರಣೆ ವೇಳೆ ನದೀಮ್ ಹೇಳಿದ್ದಾನೆ. ಒಂದು ವರ್ಷದ ಹಿಂದೆ ಇಬ್ಬರಿಗೂ ಪರಸ್ಪರ ಪರಿಚಯವಾಗಿದ್ದು ಎಂದು ಪೊಲೀಸರಿಗೆ ತಿಳಿಸಿದ್ದಾನೆ.

ಈ ಮಹಿಳೆ ಬೇರೆಯವರ ಜತೆ ಸುಧೀರ್ಘ ದೂರವಾಣಿ ಸಂಭಾಷಣೆ ಮಾಡಿದ್ದರಿಂದ ನದೀಮ್ ಅನುಮಾನಗೊಂಡು ಸೆಪ್ಟೆಂಬರ್ 17ರಂದು ಆಕೆಯ ಮನೆಗೆ ಬಂದು ಈ ಕೃತ್ಯ ಎಸಗಿದ್ದಾನೆ. ಮಚ್ಚು ಹಾಗೂ ಆಕೆಯನ್ನು ಹತ್ಯೆ ಮಾಡಿದ ಬಳಿಕ ಬದಲಾಯಿಸಲು ಹೊಸ ಬಟ್ಟೆಯೊಂದಿಗೆ ಆರೋಪಿ ಆಗಮಿಸಿದ್ದ ಎಂದು ಪೊಲೀಸರು ವಿವರಿಸಿದ್ದಾರೆ. ಈ ಬಗ್ಗೆ timesofindia.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News