ತೈವಾನ್ ಜಲಸಂಧಿಯ ಮೂಲಕ ಸಾಗಿದ ಅಮೆರಿಕ, ಕೆನಡಾದ ಯುದ್ಧನೌಕೆ

Update: 2022-09-21 18:16 GMT

ತೈಪೆ, ಸೆ.21:  ಅಂತರಾಷ್ವ್ರಿಯ ಸಮುದ್ರಮಾರ್ಗವಾಗಿ ತೈವಾನ್ ಜಲಸಂಧಿಯ ಮಾರ್ಗದ ಸ್ಥಾನಮಾನವನ್ನು ಬಲಪಡಿಸುವ ಇತ್ತೀಚಿನ ಜಂಟಿ ಕಾರ್ಯಾಚರಣೆಯ ಭಾಗವಾಗಿ ಮಂಗಳವಾರ ಅಮೆರಿಕದ ವಿಧ್ವಂಸಕ ಯುದ್ಧನೌಕೆ ಮತ್ತು ಕೆನಡಾದ ಯುದ್ಧನೌಕೆ ತೈವಾನ್ ಜಲಸಂಧಿಯ ಮೂಲಕ ಸಾಗಿದೆ ಎಂದು ವರದಿಯಾಗಿದೆ .

ತೈವಾನ್ ಹಾಗೂ ವಿಶ್ವದ ಅತ್ಯಂತ ಜನನಿಬಿಡ ಜಲಮಾರ್ಗಗಳಲ್ಲಿ ಒಂದಾಗಿರುವ ತೈವಾನ್ ಜಲಸಂಧಿಯ ಮೇಲೆ ಚೀನಾ ಹಕ್ಕು ಸಾಧಿಸುತ್ತಿದೆ. ಆದರೆ ಇದನ್ನು ನಿರಾಕರಿಸುತ್ತಿರುವ ಅಮೆರಿಕ, ತೈವಾನ್ ಜಲಸಂಧಿಯಲ್ಲಿ ಜಲಸಂಚಾರಕ್ಕೆ ಮುಕ್ತ ಸ್ವಾತಂತ್ರö್ಯವಿರಬೇಕು. ಇದು ಅಂತರಾಷ್ವ್ರಿಯ ಜಲಮಾರ್ಗ ಎಂದು ಪ್ರತಿಪಾದಿಸುತ್ತಿದ್ದು ಇದನ್ನು  ಪಾಶ್ಚಿಮಾತ್ಯ ಮಿತ್ರದೇಶಗಳು  ಬೆಂಬಲಿಸಿವೆ.

ಅಮೆರಿಕದ ವಿಧ್ವಂಸಕ ಯುದ್ಧನೌಕೆ ಯುಎಸ್‌ಎಸ್ ಹಿಗ್ಗಿನ್ಸ್ ಮತ್ತು ರಾಯಲ್ ಕೆನಡಾ ನೌಕಾಸೇನೆಯ ಹಡಗು ಸೆಪ್ಟಂಬರ್ 20ರಂದು ಅಂತರಾಷ್ಟಿçÃಯ ಕಾನೂನಿನಂತೆ  ತೈವಾನ್ ಜಲಸಂಧಿಯ ಮೂಲಕ ವಾಡಿಕೆಯ ಸಂಚಾರ ನಡೆಸಿದೆ ಎಂದು ಅಮೆರಿಕದ ನೌಕಾಪಡೆ ಘೋಷಿಸಿದೆ.

ಈ ವಾಡಿಕೆಯ ತೈವಾನ್ ಜಲಸಂಧಿ ಮೂಲಕದ ಸಂಚಾರವು ಉಚಿತ, ಮುಕ್ತ ಮತ್ತು ಅಂತರ್ಗತ ಇಂಡೊ-ಪೆಸಿಫಿಕ್ ವಲಯಕ್ಕೆ  ನಮ್ಮ ಬದ್ಧತೆಯನ್ನು ಪ್ರದರ್ಶಿಸುತ್ತದೆ ಎಂದು ಕೆನಡಾದ ರಕ್ಷಣಾ ಸಚಿವೆ ಅನಿತಾ ಆನಂದ್ ಹೇಳಿದ್ದಾರೆ. ಇಲ್ಲಿ ಅವರು ಏಶ್ಯಾ ಪೆಸಿಫಿಕ್ ವಲಯದ ಬದಲು ಇಂಡೊ-ಪೆಸಿಫಿಕ್ ವಲಯ ಎಂದು ಉಲ್ಲೇಖಿಸಿದ್ದಾರೆ.

ಇದು ಸಾರ್ವಜನಿಕ ಪ್ರಚೋದನೆಯ ಕ್ರಮ ಎಂದು ಚೀನಾ ಆಕ್ರೋಶ ವ್ಯಕ್ತಪಡಿಸಿದೆ. ನಮ್ಮ ಪಡೆಯನ್ನು ಗರಿಷ್ಟ ಎಚ್ಚರಿಕೆಯ ಮಟ್ಟದಲ್ಲಿ ಇರಿಸಲಾಗಿದ್ದು ಎಲ್ಲಾ ಬೆದರಿಕೆ ಮತ್ತು ಪ್ರಚೋದನೆಯನ್ನು ದೃಢವಾಗಿ ಎದುರಿಸಲಾಗುವುದು, ದೇಶದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಿಕೊಳ್ಳಲಾಗುವುದು ಎಂದು ಚೀನಾ ಸೇನೆಯ ವಕ್ತಾರ ಕರ್ನಲ್ ಶಿ ಯೀ ಹೇಳಿರುವುದಾಗಿ ಸಿಸಿಟಿವಿ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News