×
Ad

ಕೇರಳ : ಪಿಎಫ್‍ಐ ಕಚೇರಿಗಳ ಮೇಲೆ ಎನ್‍ಐಎ, ಇಡಿ ದಾಳಿ

Update: 2022-09-22 08:48 IST

ಕಣ್ಣೂರು: ರಾಷ್ಟ್ರೀಯ ತನಿಖಾ ಸಂಸ್ಥೆ (National Investigation Agency) ಮತ್ತು ಕಾನೂನು ಜಾರಿ ನಿರ್ದೇಶನಾಲಯ (Enforcement Directorate) ಅಧಿಕಾರಿಗಳು ಗುರುವಾರ ಬೆಳಗ್ಗೆ ಪಿಎಫ್‍ಐ ಸೇರಿದಂತೆ ಹಲವು ಸಂಘಟನೆಗಳು ಮತ್ತು ವ್ಯಕ್ತಿಗಳ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ.

ಕೇರಳದ ಮಲಪ್ಪುರಂನಲ್ಲಿ ಪಿಎಫ್‍ಐ ಅಧ್ಯಕ್ಷ ಓಎಂಎ ಸಲಾಂ ಅವರ ನಿವಾಸದ ಮೇಲೆ ಹಾಗೂ 10 ರಾಜ್ಯಗಳಲ್ಲಿ ಪಿಎಫ್‍ಐ ಕಚೇರಿಗಳ ಮೇಲೆ ದಾಳಿ ನಡೆದಿದೆ ಎಂದು ಎಎನ್‍ಐ ವರದಿ ಮಾಡಿದೆ.

ತಮಿಳುನಾಡಿನ ಕೊಯಮತ್ತೂರು, ಕುಡಲೂರು, ರಾಮನಾಡು, ದಿಂಡುಗಲ್, ಥೇಣೀ ಮತ್ತು ಥೆಂಕಾಸಿಯಲ್ಲಿ ಕೂಡಾ ಪಿಎಫ್‍ಐ ಪದಾಧಿಕಾರಿಗಳ ಮನೆ ಮೇಲೆ ದಾಳಿ ನಡೆದಿದೆ. ಚೆನ್ನೈ ಪಿಎಫ್‍ಐ ರಾಜ್ಯ ಕೇಂದ್ರ ಕಚೇರಿಯಲ್ಲಿ ಕೂಡ ಶೋಧನೆ ನಡೆಸಲಾಗಿದೆ.

ಕೇಂದ್ರೀಯ ಏಜೆನ್ಸಿಗಳ ದಾಳಿಯನ್ನು ಖಂಡಿಸಿ ಮಲಪ್ಪುರಂ ಜಿಲ್ಲೆಯ ಮಂಜೇರಿಯಲ್ಲಿ ಪಿಎಫ್‍ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. deccanherald.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News