×
Ad

ಉತ್ತರಾಖಂಡ: ಭಾರೀ ಭೂಕುಸಿತದಿಂದ ಹೆದ್ದಾರಿ ಬಂದ್

Update: 2022-09-22 13:47 IST
Photo:twitter

ರುದ್ರಪ್ರಯಾಗ: ಉತ್ತರಾಖಂಡದ ರುದ್ರಪ್ರಯಾಗದಲ್ಲಿ ಗುರುವಾರ ಭಾರೀ ಭೂಕುಸಿತ (Massive Landslide In Uttarakhand) ಉಂಟಾಗಿದೆ.  ತರ್ಸಲಿ ಗ್ರಾಮದ ಬಳಿ ಗುಡ್ಡದ ಒಂದು ಭಾಗವು ಜರಿದು ಬಿದ್ದ ಪರಿಣಾಮ ರಾಷ್ಟ್ರೀಯ ಹೆದ್ದಾರಿ-109ರಲ್ಲಿ ಸಂಚಾರಕ್ಕೆ ತಡೆವುಂಟಾಗಿದೆ.

ರಸ್ತೆ ತಡೆಯಿಂದಾಗಿ ರಸ್ತೆಯ ಇಕ್ಕೆಲಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಗುಡ್ಡದ ಭಾಗ ಬೀಳುವ ಮುನ್ನ ಸ್ಥಳೀಯರು ಪ್ರಯಾಣಿಕರಿಗೆ ಎಚ್ಚರಿಕೆ ನೀಡಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಇದೀಗ ಹೆದ್ದಾರಿಯನ್ನು ಮತ್ತೆ ತೆರೆಯಲಾಗುತ್ತಿದ್ದು, ವಾಹನಗಳ ಸಂಚಾರ ಪುನರಾರಂಭವಾಗಲಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಮಯೂರ್ ದೀಕ್ಷಿತ್ ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.

ಪ್ರಯಾಣಿಕರನ್ನು ಸುರಕ್ಷಿತ ಸ್ಥಳಗಳಲ್ಲಿ ನಿಲ್ಲಿಸಲಾಯಿತು. ಹೆದ್ದಾರಿ ತೆರೆಯಲಾಗುತ್ತಿದೆ. ಅವಶೇಷಗಳನ್ನು ತೆರವುಗೊಳಿಸಿದ ನಂತರ ಸುರಕ್ಷಿತ ವಾಹನ ಸಂಚಾರ ಪುನರಾರಂಭವಾಗಲಿದೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News