ದಿಲ್ಲಿ: ಮೌಲ್ವಿಯೊಬ್ಬರನ್ನು ಮಸೀದಿಯಲ್ಲಿ ಭೇಟಿ ಮಾಡಿದ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್

Update: 2022-09-22 09:47 GMT
ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ (PTI)

ಹೊಸದಿಲ್ಲಿ: ಆರೆಸ್ಸೆಸ್(RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಅವರು ಗುರುವಾರ ದಿಲ್ಲಿಯಲ್ಲಿ ಮೌಲ್ವಿಯೊಬ್ಬರನ್ನು ಭೇಟಿ ಮಾಡಿದ್ದಾರೆ. ಮೋಹನ್ ಭಾಗವತ್ ಅವರು ಅಖಿಲ ಭಾರತ ಇಮಾಮ್ ಸಂಘಟನೆಯ ಮೌಲ್ವಿ ಉಮರ್ ಅಹ್ಮದ್ ಇಲ್ಯಾಸಿ ಅವರನ್ನು ದಿಲ್ಲಿಯ ಹೃದಯಭಾಗದಲ್ಲಿರುವ ಮಸೀದಿಯಲ್ಲಿ ಭೇಟಿಯಾದರು ಎಂದು ವರದಿಯಾಗಿದೆ.

ಇದನ್ನು "ಮುಚ್ಚಿದ ಬಾಗಿಲಿನ ಸಭೆ" ಎಂದು ವಿವರಿಸಲಾಗಿದ್ದು, ಸಭೆಯು ಒಂದು ಗಂಟೆಗೂ ಹೆಚ್ಚು ಕಾಲ ನಡೆಯಿತು.

"ಆರೆಸ್ಸೆಸ್ ಸರಸಂಘಚಾಲಕ್ ಎಲ್ಲಾ ವರ್ಗದ ಜನರನ್ನು ಭೇಟಿ ಮಾಡುತ್ತಾರೆ. ಇದು ನಿರಂತರ ಸಾಮಾನ್ಯ 'ಸಂವಾದ' (ಚರ್ಚೆ) ಪ್ರಕ್ರಿಯೆಯ ಭಾಗವಾಗಿದೆ" ಎಂದು ಆರೆಸ್ಸೆಸ್ ವಕ್ತಾರ ಸುನೀಲ್ ಅಂಬೇಕರ್ ಹೇಳಿದ್ದಾರೆ.

ಕಳೆದ ತಿಂಗಳು ಭಾಗವತ್ ಅವರು ಐವರು ಮುಸ್ಲಿಂ ಮುಖಂಡರನ್ನು ಭೇಟಿ ಮಾಡಿದರು ಮತ್ತು ದೇಶದಲ್ಲಿ  ಪ್ರಸ್ತುತ ಸನ್ನಿವೇಶದ ಕುರಿತು ತಮ್ಮ ಕಳವಳಗಳನ್ನು ಚರ್ಚಿಸಿದರು.

ಇದನ್ನೂ ಓದಿ: ಹಿಜಾಬ್ ವಿವಾದ: ತೀರ್ಪು ಕಾಯ್ದಿರಿಸಿದ ಸುಪ್ರೀಂಕೋರ್ಟ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News