ಇರಾನ್: ಹಿಜಾಬ್‌ ವಿರೋಧಿ ಪ್ರತಿಭಟನೆಗಳ ನಡುವೆ ವಾಟ್ಸ್ಯಾಪ್‌, ಇನ್‌ಸ್ಟಾಗ್ರಾಮ್‌ ಗೆ ನಿಷೇಧ

Update: 2022-09-22 12:56 GMT
Photo: Twitter/@AlinejadMasih

ಟೆಹರಾನ್:‌ ಇರಾನ್‌ನಲ್ಲಿ ಹಿಜಾಬ್‌(Hijab) ವಿರುದ್ಧದ ಪ್ರತಿಭಟನೆಗಳು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವಂತೆಯೇ ಅಲ್ಲಿನ ಸರಕಾರ ಇನ್‌ಸ್ಟಾಗ್ರಾಮ್‌ ಮತ್ತು ವಾಟ್ಸ್ಯಾಪ್‌(Instagram, Whatsapp) ನಿರ್ಬಂಧಿಸಿದೆಯಲ್ಲದೆ ಅಂತರ್ಜಾಲ ಬಳಕೆಯ ಮೇಲೂ ಸಾಕಷ್ಟು ನಿಯಂತ್ರಣಗಳನ್ನು ವಿಧಿಸಿದೆ.

ಹಿಜಾಬ್‌ ಧರಿಸಿಲ್ಲ ಎಂಬ ಕಾರಣಕ್ಕೆ ಪೊಲೀಸರು 22  ವರ್ಷದ ಮಹ್ಸಾಅಮೀನಿ ಎಂಬ ಯುವತಿಯನ್ನು ವಶಕ್ಕೆ ಪಡೆದು ಹಲ್ಲೆಗೈದ ಪರಿಣಾಮ ಆಕೆ ಮೃತಪಟ್ಟ ನಂತರ ದೇಶಾದ್ಯಂತ ಹಿಜಾಬ್‌ ವಿರುದ್ಧ ಭುಗಿಲೆದ್ದ ಪ್ರತಿಭಟನೆಗಳು ಏಳನೇ ದಿನ ಪ್ರವೇಶಿಸಿವೆ.

ಇರಾನ್‌ನಲ್ಲಿ ಇನ್‌ಸ್ಟಾಗ್ರಾಮ್‌ ಮತ್ತು ವಾಟ್ಸ್ಯಾಪ್‌ ಬಳಕೆದಾರರು ಗರಿಷ್ಠ ಸಂಖ್ಯೆಯಲ್ಲಿದ್ದು ನಂತರದ ಸ್ಥಾನಗಳನ್ನು ಫೇಸ್ಬುಕ್‌, ಟ್ವಿಟ್ಟರ್.‌ ಟೆಲಿಗ್ರಾಮ್‌, ಯುಟ್ಯೂಬ್‌ ಮತ್ತು ಟಿಕ್‌ಟಾಕ್‌ ಪಡೆದುಕೊಂಡಿವೆ.

ಸದ್ಯ ಇರಾನ್‌ನಲ್ಲಿ ವಿಪಿಎನ್‌ ಆಕ್ಸೆಸ್‌ ಹೊಂದಿರುವವರು ಮಾತ್ರ ಅಂತಾರಾಷ್ಟ್ರೀಯ ವೆಬ್‌ಸೈಟ್‌ಗಳಿಂದ ಸೆನ್ಸಾರ್‌ರಹಿತ ವಿಷಯವನ್ನು ನೋಡಬಹುದಾಗಿದೆ. ಆದರೆ ಈ ಸಂಪರ್ಕಗಳೂ ಈಗ ನಿಧಾನಗತಿ ಪಡೆದಿವೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News