ಉತ್ತರಪ್ರದೇಶ: ಭಾರೀ ಮಳೆಗೆ 13 ಮಂದಿ ಬಲಿ, ಶಾಲೆಗಳಿಗೆ ರಜೆ ಘೋಷಣೆ

Update: 2022-09-23 05:39 GMT
Photo: NDTV

ಹೊಸದಿಲ್ಲಿ: ನಿನ್ನೆ ನಿರಂತರ ಮಳೆ ಸುರಿದ ನಂತರ ಉತ್ತರ ಪ್ರದೇಶ ಮತ್ತು ಗುರ್ಗಾಂವ್‌ನ ಕನಿಷ್ಠ 10 ಜಿಲ್ಲೆಗಳಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ.  ಖಾಸಗಿ ಮತ್ತು ಕಾರ್ಪೊರೇಟ್ ಕಚೇರಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ತಿಳಿಸಲಾಗಿದೆ. ಭಾರೀ ಮಳೆಯಿಂದಾಗಿ ದಿಲ್ಲಿಯ ಕೆಲವು ಭಾಗಗಳು ಜಲಾವೃತವಾಗಿವೆ  ಎಂದು NDTV ವರದಿ ಮಾಡಿದೆ.

ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಫಿರೋಝಾಬಾದ್‌ನಲ್ಲಿ ಜನಜೀವನದ ಮೇಲೆ ಪರಿಣಾಮ ಬೀರಿದೆ.  ಅಲಿಘರ್‌ನಲ್ಲಿ ಶಾಲೆಗಳನ್ನು ಮುಚ್ಚಲು ಸೂಚಿಸಲಾಗಿದೆ.  ಸಿಡಿಲು ಬಡಿದು, ಗೋಡೆ ಮತ್ತು ಮನೆ ಕುಸಿದುಬಿದ್ದ ಘಟನೆಗಳಲ್ಲಿ ಕನಿಷ್ಠ 13 ಜನರು ಸಾವನ್ನಪ್ಪಿದ್ದಾರೆ ಹಾಗೂ  11 ಮಂದಿ ಗಾಯಗೊಂಡಿದ್ದಾರೆ.

ಮಳೆಯಿಂದಾಗಿ ರಾಜ್ಯದ 10 ಜಿಲ್ಲೆಗಳ ಎಲ್ಲಾ ಸರಕಾರಿ ಹಾಗೂ  ಖಾಸಗಿ ಶಾಲೆಗಳಿಗೆ ಇಂದು ರಜೆ ಘೋಷಿಸಲಾಗಿದೆ. ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News