ಮಸೀದಿ, ಮದರಸಾಕ್ಕೆ ಆರೆಸ್ಸೆಸ್ ಮುಖ್ಯಸ್ಥ ಭೇಟಿ: ಇದು ‘ಭಾರತ್ ಜೋಡೋ ಯಾತ್ರೆ’ಯ ಪರಿಣಾಮ ಎಂದ ಕಾಂಗ್ರೆಸ್

Update: 2022-09-23 06:23 GMT

ಹೊಸದಿಲ್ಲಿ: ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ (RSS chief Mohan Bhagwat )ಅವರು ಅಖಿಲ ಭಾರತ ಇಮಾಮ್ ಸಂಘಟನೆಯ ಅಧ್ಯಕ್ಷರನ್ನು ಭೇಟಿಯಾಗಿರುವುದು ಪಕ್ಷದ ಭಾರತ್ ಜೋಡೋ ಯಾತ್ರೆಯ ( Bharat Jodo Yatra)ಪರಿಣಾಮವಾಗಿದೆ ಎಂದು ಕಾಂಗ್ರೆಸ್ ಮುಖಂಡ ಗೌರವ್ ವಲ್ಲಭ್ (Congress leader Gourav Vallabh )ಅವರು ಗುರುವಾರ ಪ್ರತಿಪಾದಿಸಿದ್ದಾರೆ ಹಾಗೂ  ದೇಶವನ್ನು ಒಗ್ಗೂಡಿಸುವಲ್ಲಿ  ರಾಹುಲ್ ಗಾಂಧಿ ಅವರೊಂದಿಗೆ ಸೇರುವಂತೆ ಆರೆಸ್ಸೆಸ್ ಮುಖ್ಯಸ್ಥರನ್ನು ಕೋರಿದ್ದಾರೆ.

ಪ್ರಮುಖ ಹೆಜ್ಜೆಯೊಂದರಲ್ಲಿ ಮುಸ್ಲಿಂ ಮುಖಂಡರನ್ನು ಭೇಟಿಯಾಗಿರುವ ಆರೆಸ್ಸೆಸ್  ಮುಖ್ಯಸ್ಥ ಭಾಗವತ್  ಗುರುವಾರ ದಿಲ್ಲಿಯ ಮಸೀದಿ ಮತ್ತು ಮದರಸಾವೊಂದಕ್ಕೆ ಭೇಟಿ ನೀಡಿದ್ದರು. ಆಲ್ ಇಂಡಿಯಾ ಇಮಾಮ್ ಸಂಘಟನೆಯ ಮುಖ್ಯ ಮೌಲ್ವಿ ಡಾ. ಉಮರ್ ಅಹ್ಮದ್ ಇಲ್ಯಾಸಿ ಅವರನ್ನು ಭೇಟಿ ಮಾಡಿದ್ದರು.  

ಸುದ್ದಿಗಾರರೊಂದಿಗೆ ಮಾತನಾಡಿದ ವಲ್ಲಭ್, ಪಕ್ಷದ ಭಾರತ್ ಜೋಡೋ ಯಾತ್ರೆಯ ಫಲಿತಾಂಶಗಳು ಭಾಗವತ್ ಅವರು ಮೊದಲ ಬಾರಿಗೆ ಮದರಸಾಗೆ ಭೇಟಿ ನೀಡಿದ್ದರಿಂದ ಸ್ಪಷ್ಟವಾಗಿದೆ ಎಂದು ಹೇಳಿದರು.

"ಭಾರತ್ ಜೋಡೋ ಯಾತ್ರೆ ಆರಂಭವಾಗಿ ಕೇವಲ 15 ದಿನಗಳು ಕಳೆದಿವೆ ಹಾಗೂ  ಫಲಿತಾಂಶಗಳು ಹೊರಬಂದಿವೆ. ಬಿಜೆಪಿ ವಕ್ತಾರರು ದೂರದರ್ಶನದಲ್ಲಿ '(ನಾಥೂರಾಂ) ಗೋಡ್ಸೆ ಮುರ್ದಾಬಾದ್' ಎಂದು ಹೇಳಿದರು. ಮೋಹನ್ ಭಾಗವತ್ ಅನ್ಯ ಧರ್ಮದ ವ್ಯಕ್ತಿಯ ಮನೆಗೆ ಹೋದರು. ಇದು ಭಾರತ್ ಜೋಡೋ ಯಾತ್ರೆಯ ಪರಿಣಾಮ ಎಂದು  ವಲ್ಲಭ್ ವಿಶ್ಲೇಷಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News