ದ್ವೇಷದ ಅಪರಾಧಗಳ ವಿರುದ್ಧ ಜಾಗರೂಕರಾಗಿರಿ: ಕೆನಡಾಕ್ಕೆ ತೆರಳುವ ವಿದ್ಯಾರ್ಥಿಗಳಿಗೆ ಭಾರತ ಸಲಹೆ

Update: 2022-09-23 10:04 GMT
Photo:NDTV

ಹೊಸದಿಲ್ಲಿ: "ದ್ವೇಷದ ಅಪರಾಧಗಳು ಹಾಗೂ  ಭಾರತ ವಿರೋಧಿ ಚಟುವಟಿಕೆಗಳ ತೀವ್ರ ಹೆಚ್ಚಳ" ವಿರುದ್ಧ ಜಾಗರೂಕರಾಗಿರಲು ಹಾಗೂ ಎಚ್ಚರಿಕೆ ವಹಿಸುವಂತೆ ಕೆನಡಾಕ್ಕೆ ತೆರಳುವ ತನ್ನ ವಿದ್ಯಾರ್ಥಿಗಳಿಗೆ ಭಾರತ ಸಲಹೆ ನೀಡಿದೆ. India Cautions Students On Canada 

ದ್ವೇಷದ ಅಪರಾಧಗಳು, ಜನಾಂಗೀಯ ಹಿಂಸಾಚಾರ ಹಾಗೂ  ಭಾರತ ವಿರೋಧಿ ಚಟುವಟಿಕೆಗಳ ಘಟನೆಗಳನ್ನು ವಿದೇಶಾಂಗ ಸಚಿವಾಲಯವು ಕೆನಡಾದ ಗಮನಕ್ಕೆ ತಂದಿದೆ ಎಂದು ಸರಕಾರ ತಿಳಿಸಿದೆ.

ಕ್ರೈಮ್ ಗಳ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕೆನಡಾದ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ.

 "ಮೇಲೆ ವಿವರಿಸಿದಂತೆ ಅಪರಾಧಗಳ ಹೆಚ್ಚುತ್ತಿರುವ ಘಟನೆಗಳ ದೃಷ್ಟಿಯಿಂದ, ಭಾರತೀಯ ಪ್ರಜೆಗಳು ಮತ್ತು ಕೆನಡಾದಲ್ಲಿರುವ ಭಾರತದ ವಿದ್ಯಾರ್ಥಿಗಳು ಮತ್ತು ಪ್ರಯಾಣ/ಶಿಕ್ಷಣಕ್ಕಾಗಿ ಕೆನಡಾಕ್ಕೆ ತೆರಳುವವರು ಸರಿಯಾದ ಎಚ್ಚರಿಕೆಯನ್ನು ವಹಿಸಲು ಮತ್ತು ಜಾಗರೂಕರಾಗಿರಲು ಸೂಚಿಸಲಾಗಿದೆ" ಎಂದು ಹೇಳಿಕೆ ತಿಳಿಸಿದೆ.

ಕೆನಡಾದಲ್ಲಿರುವ ಭಾರತೀಯ ಪ್ರಜೆಗಳು ಹಾಗೂ ವಿದ್ಯಾರ್ಥಿಗಳು ಒಟ್ಟಾವಾದಲ್ಲಿನ ಭಾರತೀಯ ಹೈಕ ಮಿಷನ್ ಅಥವಾ ಟೊರೊಂಟೊ ಮತ್ತು ವ್ಯಾಂಕೋವರ್‌ನಲ್ಲಿರುವ ಕಾನ್ಸುಲೇಟ್‌ಗಳಲ್ಲಿ ನೋಂದಾಯಿಸಿಕೊಳ್ಳುವಂತೆ ಸರಕಾರವು ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News