ಶಾಲೆಯ ಶೌಚಾಲಯವನ್ನು ಬರಿಗೈಯ್ಯಲ್ಲೇ ಸ್ವಚ್ಛಗೊಳಿಸಿದ ಬಿಜೆಪಿ ಸಂಸದ: ವೀಡಿಯೋ ವೈರಲ್

Update: 2022-09-23 14:49 GMT
Photo: Twitter/@Janardan_BJP

ಭೋಪಾಲ್: ಮಧ್ಯಪ್ರದೇಶದ (Madhya Pradesh) ಬಿಜೆಪಿ ಸಂಸದ ( BJP MP) ಜನಾರ್ದನ್ ಮಿಶ್ರಾ (Janardan Mishra) ಎಂಬವರು ಬರಿಗೈಯ್ಯಲ್ಲಿ ಬಾಲಕಿಯರ ಶಾಲೆಯ ಶೌಚಾಲಯವೊಂದು(toilet) ತೊಳೆಯುತ್ತಿರುವುದು ವೈರಲ್ ವೀಡಿಯೋ ವೈರಲ್ ಆಗಿದೆ.

ಈ ಕುರಿತು ಟ್ವೀಟ್ ಮಾಡಿದ ಸಂಸದ, "ಸೇವಾ ಪಖ್ವಾಡ ಭಾಗವಾಗಿ ಬಿಜೆಪಿ ಯುವಮೋರ್ಚಾ ಘಟಕವು ಖಟ್ಕರಿ ಬಾಲಕಿಯರ ಶಾಲೆಯ ಶೌಚಾಲಯಗಳನ್ನು ಸ್ವಚ್ಛಗೊಳಿಸಿದೆ, ನಂತರ ಗಿಡ ನೆಡುವ ಕಾರ್ಯಕ್ರಮ ನಡೆಯಿತು" ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯ ಜನ್ಮದಿನವಾದ ಸೆಪ್ಟೆಂಬರ್ 17ರಿಂದ ಆರಂಭಗೊಂಡು ಯುವಮೋರ್ಚಾ ಸ್ವಚ್ಛತಾ ಕಾರ್ಯಕ್ರಮ ನಡೆಸುತ್ತಿದೆ.

ರೇವಾ ಸಂಸದರಾಗಿರುವ ಜನಾರ್ದನ್ ಅವರು ಶಾಲೆಗೆ ಭೇಟಿ ನೀಡಿದಾಗ ಅಲ್ಲಿನ ನೈರ್ಮಲ್ಯರಹಿತ ಶೌಚಾಲಯ ನೋಡಿ ತಾವಾಗಿಯೇ ಬರಿಗೈಯ್ಯಲ್ಲಿ ಅದನ್ನು ಸ್ವಚ್ಛಗೊಳಿಸಲು ನಿರ್ಧರಿಸಿದ್ದರು ಎಂದು ವರದಿಯಾಗಿದೆ.

ಸ್ವಚ್ಛತೆ ಕಾಪಾಡುವುದು ಎಲ್ಲರ ಕರ್ತವ್ಯವೆಂದ ಜನಾರ್ದನ್ ಮಿಶ್ರಾ, ತಾನು ಸ್ವಚ್ಛತೆ ಅಭಿಯಾನದಲ್ಲಿ ಭಾಗವಹಿಸುತ್ತಿರುವುದು ಇದು ಮೊದಲ ಬಾರಿಯಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಉಗ್ರ ಸಂಘಟನೆ ಜೊತೆ ನಂಟಿನ ಆರೋಪದಲ್ಲಿ ಬಂಧಿತ ಯುವಕನ ತಂದೆ ನಿಧನ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News