ಹಿರಿಯ ಕಾಂಗ್ರೆಸ್ ನಾಯಕ ಆರ್ಯಾದನ್ ಮುಹಮ್ಮದ್ ನಿಧನ

Update: 2022-09-25 06:54 GMT
ಆರ್ಯಾದನ್ ಮುಹಮ್ಮದ್ (Photo: Twitter)

ಕೊಚ್ಚಿ: ಹಿರಿಯ ಕಾಂಗ್ರೆಸ್ ನಾಯಕ(Congress leader) ಹಾಗೂ ಕೇರಳದ ಮಾಜಿ ಸಚಿವ ಆರ್ಯಾದನ್ ಮುಹಮ್ಮದ್(Aryadan Muhammed) ರವಿವಾರ ಕೋಝಿಕ್ಕೋಡ್ ನಲ್ಲಿ ನಿಧನರಾದರು. ಅವರಿಗೆ 87 ವರ್ಷ ವಯಸ್ಸಾಗಿತ್ತು.

ಕೇರಳದಲ್ಲಿ ಕಾಂಗ್ರೆಸ್ ನ ಪ್ರಮುಖ ಮುಸ್ಲಿಂ ನಾಯಕರಾಗಿದ್ದ ಮುಹಮ್ಮದ್ ಅವರು ಮಲಪ್ಪುರಂನ ನಿಲಂಬೂರ್ ಕ್ಷೇತ್ರದಿಂದ ಎಂಟು ಬಾರಿ ರಾಜ್ಯ ವಿಧಾನಸಭೆಗೆ ಚುನಾಯಿತರಾಗಿದ್ದರು. ನಾಲ್ಕು ಅವಧಿಗೆ ಸಚಿವರಾಗಿ ಸೇವೆ ಸಲ್ಲಿಸಿದ್ದರು.

2011 ರಿಂದ 2016 ರವರೆಗಿನ ಕಾಂಗ್ರೆಸ್ ಆಡಳಿತದಲ್ಲಿ ಅವರು ಉಮ್ಮನ್ ಚಾಂಡಿ ಸರಕಾರದಲ್ಲಿ ವಿದ್ಯುತ್ ಸಚಿವರಾಗಿದ್ದರು.

1952 ರಲ್ಲಿ ಕಾಂಗ್ರೆಸ್ ಸೇರಿದ್ದ ಮುಹಮ್ಮದ್ ಅವರು, 1958 ರಲ್ಲಿ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ ಸದಸ್ಯರಾದರು. ನಂತರ ಅವರು ಮಲಪ್ಪುರಂ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು ಹಾಗೂ ಕಾಂಗ್ರೆಸ್ಸಿನ ಟ್ರೇಡ್ ಯೂನಿಯನ್ ವಿಭಾಗವಾದ INTUC ಯ ರಾಜ್ಯ ನಾಯಕರಾಗಿದ್ದರು.

ರಾಹುಲ್ ಗಾಂಧಿ ಸಂತಾಪ: ಕೇರಳದ ಹಿರಿಯ ಕಾಂಗ್ರೆಸ್ ನಾಯಕ ಆರ್ಯಾದನ್ ಮುಹಮ್ಮದ್ ನಿಧನಕ್ಕೆ ರಾಹುಲ್ ಗಾಂಧಿ ಸಂತಾಪ ಸೂಚಿಸಿದ್ದಾರೆ.

"8 ಬಾರಿ ಶಾಸಕರಾಗಿದ್ದ ಅವರು ತಳಮಟ್ಟದ ರಾಜಕಾರಣಿ, ಅತ್ಯುತ್ತಮ ಆಡಳಿತಗಾರ ಹಾಗೂ  ಉತ್ತಮ ವ್ಯಕ್ತಿಯಾಗಿದ್ದರು.  ಅವರ ಅಗಲಿಕೆ ಪಕ್ಷಕ್ಕೆ ಅಪಾರ ನಷ್ಟ ಹಾಗೂ ವೈಯಕ್ತಿಕವಾಗಿ ನನಗೂ ನಷ್ಟವಾಗಿದೆ'' ಎಂದು ರಾಹುಲ್ ಗಾಂಧಿ ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News