ಚಂಡಿಗಢ ವಿಮಾನ ನಿಲ್ದಾಣಕ್ಕೆ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಹೆಸರು: ಪ್ರಧಾನಿ ಮೋದಿ

Update: 2022-09-25 07:34 GMT
ಚಂಡಿಗಢ ವಿಮಾನ ನಿಲ್ದಾಣ, Photo:twitter

ಹೊಸದಿಲ್ಲಿ: ಚಂಡಿಗಢ ವಿಮಾನ ನಿಲ್ದಾಣಕ್ಕೆ (Chandigarh Airport ) ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ (Bhagat Singh)ಅವರ ಹೆಸರನ್ನು ಮರುನಾಮಕರಣ ಮಾಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ರವಿವಾರ  ತಮ್ಮ ಮಾಸಿಕ ರೇಡಿಯೋ ಭಾಷಣ "ಮನ್ ಕಿ ಬಾತ್" ನಲ್ಲಿ ಘೋಷಿಸಿದರು.

"ಮಹಾನ್ ಸ್ವಾತಂತ್ರ್ಯ ಹೋರಾಟಗಾರನಿಗೆ ಗೌರವ ಸೂಚಕವಾಗಿ ಚಂಡಿಗಢ ವಿಮಾನ ನಿಲ್ದಾಣಕ್ಕೆ ಈಗ ಶಹೀದ್ ಭಗತ್ ಸಿಂಗ್ ಹೆಸರಿಡಲು ನಿರ್ಧರಿಸಲಾಗಿದೆ" ಎಂದು ಪ್ರಧಾನಿ ಮೋದಿ ಹೇಳಿದರು.

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಗೆ ಸಾಂಕೇತಿಕ ಗೌರವ ಸಲ್ಲಿಸಿ ತಮ್ಮ ಅಧಿಕಾರ ಆರಂಭಿಸಿದ್ದರು.  ಭಗತ್ ಸಿಂಗ್ ಅವರ ಪೂರ್ವಜರ ಗ್ರಾಮವಾದ ಖಟ್ಕರ್ ಕಲಾನ್‌ನಲ್ಲಿ ಭಗವಂತ್ ಮಾನ್ ಅವರ ಪ್ರಮಾಣವಚನ ಸಮಾರಂಭವನ್ನು ಎಎಪಿ ಆಯೋಜಿಸಿತ್ತು.

ಆಮ್ ಆದ್ಮಿ ಪಕ್ಷಕ್ಕೆ ತಿರುಗೇಟು ನೀಡಲು ಪ್ರಧಾನಿ ಏರ್ ಪೋರ್ಟ್ ಗೆ ಭಗತ್ ಸಿಂಗ್ ಹೆಸರು ಇಡಲು ಮುಂದಾಗಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಭಗತ್ ಸಿಂಗ್ ಹುತಾತ್ಮರಾದ ದಿನವಾದ ಮಾರ್ಚ್ 23 ರಂದು ಪ್ರತಿ ವರ್ಷ ಸಾರ್ವಜನಿಕ ರಜೆ ಎಂದು ಘೋಷಿಸಲಾಗುವುದು ಎಂದು ಭಗವಂತ್ ಮಾನ್ ತಮ್ಮ ಕಚೇರಿಯಲ್ಲಿ ಕೆಲವೇ ದಿನಗಳ ಹಿಂದೆ ಘೋಷಿಸಿದ್ದರು.

ಯುವಜನತೆಯಲ್ಲಿ ಅದರಲ್ಲೂ ಮುಖ್ಯವಾಗಿ ಉತ್ತರ ಭಾರತದ ಗ್ರಾಮೀಣ ಪ್ರದೇಶದಲ್ಲಿ ಜನಪ್ರಿಯವಾಗಿರುವ ಭಗತ್ ಸಿಂಗ್ ಅವರ ಪರಂಪರೆಯನ್ನು ಪಡೆದುಕೊಳ್ಳಲು AAP ಎಚ್ಚರಿಕೆಯಿಂದ ಕಾರ್ಯತಂತ್ರ ರೂಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News