ಆಂಧ್ರಪ್ರದೇಶದ ಆಸ್ಪತ್ರೆಯಲ್ಲಿ ಬೆಂಕಿ: ವೈದ್ಯ, ಅವರ ಇಬ್ಬರು ಮಕ್ಕಳು ಮೃತ್ಯು

Update: 2022-09-25 08:31 GMT
Photo:NDTV

ಆಂಧ್ರಪ್ರದೇಶ: ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಆಸ್ಪತ್ರೆಯಲ್ಲಿ ರವಿವಾರ ಬೆಳಿಗ್ಗೆ ಸಂಭವಿಸಿದ ಅಗ್ನಿ ಅವಘಡದಲ್ಲಿ ವೈದ್ಯ ಹಾಗೂ  ಅವರ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ.

ಸಾವನ್ನಪ್ಪಿರುವ ಹೆಣ್ಣು ಮಗು 9 ವರ್ಷವಾಗಿದ್ದರೆ, ಗಂಡು 14 ವರ್ಷ ವಯಸ್ಸಿನವರಾಗಿದ್ದರು.

ಪ್ರಾಥಮಿಕ ತನಿಖೆಯ ಆಧಾರದ ಮೇಲೆ ಅಗ್ನಿಶಾಮಕ ದಳದವರು ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಿದ್ದಾರೆ. ಕಾರ್ತಿಕೇಯ ಆಸ್ಪತ್ರೆ ಕಟ್ಟಡದಲ್ಲಿ ವಾಸವಿದ್ದ ಡಾ.ರವಿಶಂಕರ್ ರೆಡ್ಡಿ ಕುಟುಂಬ ಬೆಂಕಿ ಹೊತ್ತಿಕೊಂಡಾಗ ಮಲಗಿದ್ದರು.

ಡಾ. ರೆಡ್ಡಿ ಅವರು ಎರಡನೇ ಮಹಡಿಯಲ್ಲಿದ್ದು ಮನೆಯೊಳಗಿನ ಮೆಟ್ಟಿಲುಗಳ ಮೂಲಕ ಕೆಳಗೆ ಬಂದರು.  ಆಗ ಅವರು ಹೊಗೆಯಿಂದ ಉಸಿರುಗಟ್ಟಿ ಬಿದ್ದಿರಬಹುದು ಮತ್ತು ಸಂಪೂರ್ಣವಾಗಿ ಸುಟ್ಟುಹೋಗಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

"ಅಗ್ನಿಶಾಮಕ ರಕ್ಷಣಾ ಸಿಬ್ಬಂದಿ ಬಾಗಿಲು ಮುರಿದು ಮಕ್ಕಳನ್ನು ಏಣಿಯ ಮೂಲಕ ಕೆಳಗಿಳಿಸಿದ್ದಾರೆ. ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು  ಆದರೆ ಅವರು ವಿಷಕಾರಿ ಕಾರ್ಬನ್ ಮಾನಾಕ್ಸೈಡ್ ಅನಿಲವನ್ನು ಹೆಚ್ಚು ಉಸಿರಾಡಿದ್ದರಿಂದ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ. ಸಾಕಷ್ಟು ಪೀಠೋಪಕರಣಗಳು ಮತ್ತು ಗೃಹೋಪಯೋಗಿ ವಸ್ತುಗಳು ಇದ್ದವು ಮತ್ತು ಹೊಗೆ ಹೊರಬರಲು ಸಾಕಷ್ಟು ಬಾಗಿಲು ಮತ್ತು ಕಿಟಕಿಗಳಿಲ್ಲದ ಕಾರಣ ಅದು ಗ್ಯಾಸ್ ಚೇಂಬರ್ ಆಯಿತು" ಎಂದು ಅಗ್ನಿಶಾಮಕ ಅಧಿಕಾರಿಯೊಬ್ಬರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News