ಬಂಟಕಲ್ಲು: ‘ನೆತ್ತರ ನೆರವು’ ರಕ್ತದಾನ ಶಿಬಿರ

Update: 2022-09-25 14:20 GMT

ಶಿರ್ವ, ಸೆ.25: ಬಂಟಕಲ್ಲು ನಾಗರಿಕ ಸೇವಾ ಸಮಿತಿ ಆಶ್ರಯದಲ್ಲಿ ರೋಟರಿ ಕ್ಲಬ್ ಶಿರ್ವ, ಅಭಯಹಸ್ತ  ಚಾರಿಟೇಬಲ್ ಟ್ರಸ್ಟ್ ಉಡುಪಿ, ಲಯನ್ಸ್ ಕ್ಲಬ್ ಬಂಟಲ್ಲು ಬಿ.ಸಿ.ರೋಡ್, ಲಯನ್ಸ್ ಕ್ಲಬ್ ಬಂಟಕಲ್ಲು ಜಾಸ್ಮಿನ್, ಲಯನ್ಸ್ ಕ್ಲಬ್ ಪರ್ಕಳ, ರಾಜಾಪುರ ಸಾರಸ್ವತ ಯುವವೃಂದ, ಅಟೋರಿಕ್ಷಾ ಚಾಲಕ ಮಾಲಕರ ಸಂಘ, ಉಡುಪಿ ಜಿಲ್ಲಾ ಟ್ಯಾಕ್ಸಿ ಮತ್ತು ಮ್ಯಾಕ್ಸ್ ಕ್ಯಾಬ್ ಅಸೋಸಿ ಯೇಶನ್ ಬಂಟಕಲ್ಲು ಘಟಕ, ಸ್ವಸ್ಥಾ ಆಯೋಗ  ಪಾಂಬೂರು ಚರ್ಚ್  ಇವರ ಸಹಭಾಗಿತ್ವದಲ್ಲಿ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಯ ರಕ್ತನಿಧಿ ಸಹಯೋಗ ದೊಂದಿಗೆ ನೆತ್ತರ ನೆರವು ರಕ್ತದಾನ ಶಿಬಿರವನ್ನು ರವಿವಾರ ಬಂಟಕಲ್ಲು ರೋಟರಿ ಭವನದಲ್ಲಿ ಆಯೋಜಿಸಲಾಗಿತ್ತು.

ಶಿಬಿರವನ್ನು 70 ಬಾರಿ ರಕ್ತದಾನ ಮಾಡಿದ ಶಾಲಾ ಮುಖ್ಯ ಶಿಕ್ಷಕ ದೇವದಾಸ್ ಪಾಟ್ಕರ್ ಮುದರಂಗಡಿ ಉದ್ಘಾಟಿಸಿದರು. ಶಿರ್ವ ರೋಟರಿ ಅಧ್ಯಕ್ಷ ಡಾ.ವಿಠಲ್ ನಾಯಕ್ ಮಾತನಾಡಿದರು.

ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ರಕ್ತನಿಧಿ ವಿಭಾಗದ ಮುಖ್ಯಸ್ಥೆ ಡಾ.ಆನ್ಟಿ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸತೀಶ್ ಸಾಲಿಯಾನ್, ಲಯನ್ಸ್ ಕ್ಲಬ್ ಬಂಟಕಲ್ಲು ಬಿ.ಸಿ. ರೋಡ್ ಅಧ್ಯಕ್ಷ ವಿಲ್ಫ್ರೆಡ್ ಪಿಂಟೊ, ಲಯನ್ಸ್ ಜಾಸ್ಮಿಸ್ ಅಧ್ಯಕ್ಷೆ ರೀನಾ ಡಿಸೋಜ, ಪರ್ಕಳ ಲಯನ್ಸ್ ಅಧ್ಯಕ್ಷ ಪದ್ಮನಾಭ ಭಂಡಾರಿ, ರಾಜಾಪುರ ಸಾರಸ್ವತ ಯುವೃಂದದ ಅಧ್ಯಕ್ಷ ರಾಘವೇಂದ್ರ ನಾಯಕ್ ಪಾಲಮೆ,  ಬಂಟಕಲ್ಲು ಅಟೋರಿಕ್ಷಾ ಚಾಲಕ ಮಾಲಕದ ಸಂಘದ ಅಧ್ಯಕ್ಷ ಮಂಜುನಾಥ್ ಪಡುಬೆಳ್ಳೆ, ಬಿ.ಸಿ.ರೋಡ್ ಘಟಕದ ಅಧ್ಯಕ್ಷ ಡೇನಿಸ್ ಡಿಸೋಜ, ಉಡುಪಿ ಜಿಲ್ಲಾ ಟ್ಯಾಕ್ಸಿ ಹಾಗೂ ಮ್ಯಾಕ್ಸ್ ಕ್ಯಾಬ್ ಅಸೋಸಿಯೇಶನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್ ಕೊಟ್ಯಾನ್, ಬಂಟಕಲ್ಲು ಘಟಕದ ಅಧ್ಯಕ್ಷ ಉಮೇಶ್ ರಾವ್,  ಪಾಂಬೂರು ಚರ್ಚ್ ಸ್ವಸ್ಥಾ ಆಯೋಗದ ಅಧ್ಯಕ್ಷೆ ಜೆಸಿಂತಾ ಸಲ್ಡಾನ್ಹಾ ಉಪಸ್ಥಿತರಿ ದ್ದರು.

ಬಂಟಕಲ್ಲು ನಾಗರಿಕ ಸಮಿತಿ ಅಧ್ಯಕ್ಷ ಕೆ.ಆರ್.ಪಾಟ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ನಾಗರಿಕ ಸಮಿತಿಯ ವಾಲೆಟ್ ಕಸ್ತಲಿನೊ ನಿರೂಪಿಸಿದರು. ರಕ್ತದಾನಿಗಳಿಗೆ ಅರ್ಹತಾಪತ್ರ ಹಾಗೂ ಆಕರ್ಷಕ ಕಿಟ್ ನೀಡಿ ಅಭಿನಂದಿಸಲಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News