ಸುಪ್ರೀಂ ಕೋರ್ಟ್‌ನಲ್ಲಿ ಉತ್ತರ ಪ್ರದೇಶ ಸರಕಾರದ ವಕೀಲರಾಗಿ ಸಿಜೆಐ ಲಲಿತ್ ಪುತ್ರ ಶ್ರೀಯಶ್ ನೇಮಕ
ಹೊಸದಿಲ್ಲಿ,ಸೆ.26: ಉತ್ತರ ಪ್ರದೇಶ(Uttar Pradesh) ಸರಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ತನ್ನ ಹಿರಿಯ ವಕೀಲರನ್ನಾಗಿ ಭಾರತದ ಮುಖ್ಯ ನ್ಯಾಯಾಧೀಶ (ಸಿಜೆಐ) ಯು.ಯು.ಲಲಿತ್ (Chief Justice UU Lalit) ಅವರ ಪುತ್ರ ಶ್ರೀಯಶ್ ಲಲಿತ್ (Shreeyash Lalit) ಅವರನ್ನು ನೇಮಕಗೊಳಿಸಿದೆ. ಅವರ ನೇಮಕವನ್ನು ಸೆ.21ರಂದು ಅಧಿಸೂಚಿಸಲಾಗಿತ್ತು.
ರಾಜ್ಯ ಸರಕಾರವು ಶ್ರೀಯಶ್ ಲಲಿತ ಜೊತೆಗೆ ಇತರ ಮೂವರು ವಕೀಲರನ್ನೂ ಸರ್ವೋಚ್ಚ ನ್ಯಾಯಾಲಯದಲ್ಲಿ ತನ್ನ ಪ್ರತಿನಿಧಿಗಳನ್ನಾಗಿ ನೇಮಕಗೊಳಿಸಿದೆ. ಉ.ಪ್ರ.ಸರಕಾರವು 400ಕ್ಕೂ ಅಧಿಕ ವಕೀಲರನ್ನು ತನ್ನ ಪ್ರತಿನಿಧಿಗಳ ಪಟ್ಟಿಯಲ್ಲಿ ಹೊಂದಿದೆ ಎಂದು ಅಲಹಾಬಾದ್ ಉಚ್ಚ ನ್ಯಾಯಾಲಯವು ಕಳೆದ ಮೇ ತಿಂಗಳಿನಲ್ಲಿ ಗಮನಿಸಿತ್ತು.
2017ರಲ್ಲಿ ದಿಲ್ಲಿ ವಿವಿಯಿಂದ ಕಾನೂನು ಪದವಿಯನ್ನು ಪಡೆದಿದ್ದ ಶ್ರೀಯಶ 2018ರಲ್ಲಿ ಕ್ಯಾಂಬ್ರಿಜ್ ವಿವಿಯಿಂದ ಸ್ನಾತಕೋತ್ತರ ಪದವಿಯನ್ನು ಗಳಿಸಿದ್ದರು. ಆ.17ರಂದು ಸಿಜೆಐ ಆಗಿ ಅಧಿಕಾರ ಸ್ವೀಕರಿಸಿರುವ ನ್ಯಾ.ಯು.ಯು.ಲಲಿತ್ ಅವರು ನ.8ರಂದು ನಿವೃತ್ತರಾಗಲಿದ್ದಾರೆ.
ಇದನ್ನೂ ಓದಿ: ಮಲಯಾಳಂ ನಟ ಶ್ರೀನಾಥ್ ಭಾಸಿ ಬಂಧನ