ವಿಶ್ವ ಪ್ರವಾಸೋದ್ಯಮ ದಿನಾಚರಣೆ: ಸೆ.27ರಂದು ಬೈಕ್‌ ರ‍್ಯಾಲಿ

Update: 2022-09-26 13:56 GMT

ಉಡುಪಿ, ಸೆ.26: ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ಕರಾವಳಿ ಪ್ರವಾಸೋದ್ಯಮ ಸಂಘಟನೆ ಉಡುಪಿ ಜಿಲ್ಲೆ ಇವರ ಸಹಯೋಗ ದೊಂದಿಗೆ ಇಂದು ನಡೆಯುವ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಪ್ರಯುಕ್ತ  ಬೈಕ್ ರ‍್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ.

‘ಬ್ಲಾಗರ್ಸ್ ಮೀಟ್-ಪ್ರವಾಸೋದ್ಯಮ ಪುನರಾವಲೋಕನ’ ಎಂಬ ಸಂದೇಶ ದೊಂದಿಗೆ ನಡೆಯುವ ಬೈಕ್ ರ‍್ಯಾಲಿಗೆ ಮಂಗಳವಾರ ಬೆಳಗ್ಗೆ 10.30ಕ್ಕೆ ಮಣಿಪಾಲದ ಜಿಲ್ಲಾಡಳಿತದ ಸಂಕೀರ್ಣದಲ್ಲಿ ಶಾಸಕ ಕೆ.ರಘುಪತಿ ಭಟ್ ಚಾಲನೆ ನೀಡಲಿದ್ದಾರೆ.

ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ., ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚೀಂದ್ರ ಮತ್ತಿತರರು ಉಪಸ್ಥಿತರಿರುವರು. 

ಮಣಿಪಾಲ ಜಿಲ್ಲಾಧಿಕಾರಿ ಸಂಕೀರ್ಣದಿಂದ ಹೊರಡುವ ಬೈಕ್‌ರ್ಯಾಲಿಯು ಸಿಂಡಿಕೇಟ್ ವೃತ್ತ- ಬಬ್ಬುಸ್ವಾಮಿ ದೇವಸ್ಥಾನ ಎದುರು ಯುಟರ್ನ್ ಪಡೆದು  ಟೈಗರ್ ಸರ್ಕಲ್- ಕಲ್ಸಂಕ- ಅಮ್ಮುಂಜೆ ಪೆಟ್ರೋಲ್ ಬಂಕ್-ತನಿಷ್ಕ ಜ್ಯುವೆಲ್ಲರಿ ಎಡಭಾಗ - ಸಂಸ್ಕೃತ ಕಾಲೇಜು - ಕಲ್ಪನಾ ಥಿಯೇಟರ್- ಜೋಡುಕಟ್ಟೆಯಲ್ಲಿ ಯೂಟರ್ನ್ - ಕೆ.ಎಂ ಮಾರ್ಗ- ಶಿರಿಬೀಡು ಎಡಭಾಗ- ಕರಾವಳಿ ಬೈಪಾಸ್ ರಸ್ತೆ ಮೂಲಕ ಮಲ್ಪೆ ಬೀಚ್‌ಗಾಂಧಿ ಪ್ರತಿಮೆ ಬಳಿ ಸಮಾಪನಗೊಳ್ಳಲಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News