ರಶ್ಯ ಸೆರೆ ಹಿಡಿದ ಸೈನಿಕನ ಮೊದಲ, ನಂತರದ ಆಘಾತಕಾರಿ ಚಿತ್ರಗಳನ್ನು ಬಿಡುಗಡೆ ಮಾಡಿದ ಉಕ್ರೇನ್

Update: 2022-09-27 17:31 GMT
Photo : NDTV 

ಕೀವ್ (ಉಕ್ರೇನ್), ಸೆ. 27: ರಶ್ಯದ ಬಂಧನದಲ್ಲಿದ್ದು ಬದುಕಿ ಬಂದ ಉಕ್ರೇನ್‌ನ ಸೈನಿಕರೊಬ್ಬರ ಆಘಾತಕಾರಿ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಉಕ್ರೇನ್ ರಕ್ಷಣಾ ಸಚಿವಾಲಯವು ಮಿಖೈಲೊ ಡಿಯಾನೊವ್‌ರ ಚಿತ್ರಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. ಮುಖ ಮತ್ತು ಕೈಗಳಲ್ಲಿ ಗಾಯಗಳನ್ನು ಹೊಂದಿರುವ ಹಾಗೂ ದೈಹಿಕವಾಗಿ ಅತ್ಯಂತ ಕ್ಷೀಣವಾಗಿರುವ ಈ ಸೈನಿಕ ಬದುಕಿ ಬಂದದ್ದೇ ಪವಾಡ ಎಂದು ಅದು ಹೇಳಿದೆ.

‘‘ಉಕ್ರೇನ್ ಸೈನಿಕ ಮಿಖೈಲೊ ಡಿಯಾನೊವ್ ಅದೃಷ್ಟವಂತರ ಪೈಕಿ ಒಬ್ಬರು. ಅವರ ಇತರ ಸಹ ಯುದ್ಧ ಕೈದಿಗಳಿಗೆ ಹೋಲಿಸಿದರೆ ಅವರು ಅದೃಷ್ಟವಂತರು. ಅವರು ರಶ್ಯದ ಸೆರೆಯಿಂದ ಜೀವಂತವಾಗಿ ಹೊರಬಂದಿದ್ದಾರೆ’’ ಎಂಬುದಾಗಿ ರಕ್ಷಣಾ ಸಚಿವಾಲಯವು ಚಿತ್ರಕ್ಕೆ ವಿವರಣೆಯನ್ನು ನೀಡಿದೆ.

‘‘ಜಿನೇವಾ ಒಪ್ಪಂದವನ್ನು ರಶ್ಯ ಅನುಸರಿಸುವುದು ಹೀಗೆ. ರಶ್ಯವು ಹೀಗೆ ಅನಾಗರಿಕ ನಾಝಿ ಪರಂಪರೆಯನ್ನು ಮುಂದುವರಿಸುತ್ತಿದೆ’’ ಎಂದು ಅದು ಹೇಳಿದೆ.

ಈ ಸೈನಿಕನನ್ನು ರಶ್ಯವು ಈ ವರ್ಷದ ಆದಿ ಭಾಗದಲ್ಲಿ ಮರಿಯುಪೋಲ್‌ನಲ್ಲಿ ಬಂಧಿಸಿತ್ತು. ರಶ್ಯವು ಕಳೆದ ಬುಧವಾರ ಬಿಡುಗಡೆಗೊಳಿಸಿದ 205 ಉಕ್ರೇನ್ ಯುದ್ಧ ಕೈದಿಗಳ ಪೈಕಿ ಅವರು ಒಬ್ಬರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News