ಮನೆಗೆ ನುಗ್ಗಿ ನಗ ನಗದು ಕಳವು
Update: 2022-09-28 20:49 IST
ಮಣಿಪಾಲ, ಸೆ.28: ಕುಂಜಿಬೆಟ್ಟು ಹಯಗ್ರೀವ ನಗರ 7ನೇ ಕ್ರಾಸ್ ಎಂಬಲ್ಲಿ ಸೆ.27ರಂದು ಮಧ್ಯಾಹ್ನ ವೇಳೆ ಮನೆಗೆ ನುಗ್ಗಿದ ಕಳ್ಳರು ನಗನಗದು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಡಾ.ಮಂಜುನಾಥ ಭಟ್ ಎಂಬವರ ಮನೆಯ ಎದುರಿನ ಬಾಗಿಲು ಮುರಿದು ಒಳ ಪ್ರವಶಿಸಿದ ಕಳ್ಳರು, ಕಪಾಟಿನಲ್ಲಿದ್ದ 20 ಸಾವಿರ ರೂ. ಮೌಲ್ಯದ ಚಿನ್ನದ ಉಂಗುರ ಮತ್ತು 4000 ರೂ. ನಗದು ಹಣ ಕಳವು ಮಾಡಿಕೊಂಡು ಹೋಗಿ ದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.