ಸೆ.29ರ ಮುಷ್ಕರಕ್ಕೆ ಸರಕಾರಿ ನೌಕರರ ಸಂಘದ ಬೆಂಬಲವಿಲ್ಲ

Update: 2022-09-28 15:32 GMT
ಸಾಂದರ್ಭಿಕ ಚಿತ್ರ

ಉಡುಪಿ, ಸೆ.28: ಸರಕಾರಿ ನೌಕರರ ಒಕ್ಕೂಟದ ಹೆಸರಿನಲ್ಲಿ ಸೆ.29ರಂದು ಕರೆ ನೀಡಿರುವ ಮುಷ್ಕರಕ್ಕೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಉಡುಪಿ ಜಿಲ್ಲಾ ಶಾಖೆ ಬೆಂಬಲ ನೀಡುತ್ತಿಲ್ಲ ಹಾಗೂ ಈ ಮುಷ್ಕರದಲ್ಲಿ ಜಿಲ್ಲೆಯ ಯಾವುದೇ ನೌಕರರು ಭಾಗವಹಿಸುತ್ತಿಲ್ಲ ಎಂದು ಜಿಲ್ಲಾ ಸಂಘದ ಅಧ್ಯಕ್ಷ ದಿನಕರ ಶೆಟ್ಟಿ ಅಂಪಾರು ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿರುವ ಅವರು,  ಸರಕಾರಿ ನೌಕರರ ಒಕ್ಕೂಟ ಬೆಂಗಳೂರು ಇವರು ವೇತನ ಆಯೋಗ ರಚನೆ ಹಾಗೂ ಎನ್‌ಪಿಎಸ್ ರದ್ಧತಿ ಬಗ್ಗೆ ಸರಕಾರದ ಗಮನ ಸೆಳೆಯಲು ಸೆ.29ರಂದು ಮುಷ್ಕರಕ್ಕೆ ಕರೆ ನೀಡಿರುವುದು ನಮ್ಮ ಗಮನಕ್ಕೆ ಬಂದಿದೆ. ಈಗಾಗಲೇ ವೇತನ ಆಯೋಗ ರಚಿಸುವ ಬಗ್ಗೆ ಮುಖ್ಯಮಂತ್ರಿಗಳು ಸ್ಪಷ್ಟ ಭರವಸೆ ನೀಡಿದ್ದರೂ, ನೌಕರರಲ್ಲಿ ಗೊಂದಲ ಮೂಡಿಸಲು ಪ್ರಯತ್ನಿ ಸುತ್ತಿರುವುದು ವಿಪರ್ಯಾಸ ಎಂದವರು ಹೇಳಿದ್ದಾರೆ.

ನಮ್ಮ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎನ್‌ಪಿಎಸ್ ನೌಕರರ ಹಾಗೂ  ನಮ್ಮ ಸಂಘದ ಬಾಂದವ್ಯ ಸಮನ್ವಯದಿಂದ ಕೂಡಿದೆ. ಈ ಹಿಂದಿನಂತೆ ಮುಂದೆ ಸಹ ಎನ್‌ಪಿಎಸ್ ನೌಕರರ ಸಮಸ್ಯೆ ಬಗ್ಗೆ ಜೊತೆಯಾಗಿ ಹೋರಾಟ ಮಾಡಿ ಅವರಿಗೆ ನ್ಯಾಯ ಒದಗಿಸುವ ಬಗ್ಗೆ ತಿಳಿಸಲಾಗಿದೆ ಎಂದು ದಿನಕರ ಶೆಟ್ಟಿ ಅಂಪಾರು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News