ಪಿಎಫ್‌ಐ ಶಕ್ತಿಗಳು ಮರುಹುಟ್ಟು ಪಡೆಯದಂತೆ ಕ್ರಮ ಅಗತ್ಯ: ಪೇಜಾವರ ಶ್ರೀ
Update: 2022-09-28 22:02 IST
ಉಡುಪಿ, ಸೆ.28: ಪಿಎಫ್‌ಐ ನಿಷೇಧಿಸಿರುವುದರಿಂದ ತುಂಬಾ ನೆಮ್ಮದಿಯಾಯಿತು. ಸಮಾಜ ವಿರೋಧಿ ಚಟುವಟಿಕೆ ನಡೆಸುವವರಿಗೆ ಇದೊಂದು ಪಾಠವಾಗಬೇಕು. ಸಮಾಜದಲ್ಲಿ ಯಾರೂ ಕೂಡ ವಿದ್ವಂಸಕ ಕೃತ್ಯ ಮಾಡಬಾರದು. ಸರಕಾರವು ಕೂಡ ಕಾಲಕಾಲಕ್ಕೆ ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥರು ಹೇಳಿದ್ದಾರೆ.
ಇಂತಹ ಶಕ್ತಿಗಳು ಮರುಹುಟ್ಟು ಪಡೆಯದಂತೆ ನೋಡಿಕೊಳ್ಳಬೇಕು. ಸಮಾಜ ಮತ್ತು ರಾಜಕೀಯ ಪಕ್ಷಗಳು ಇಂತಹ ಸಂಘಟನೆಗಳಿಗೆ ಪ್ರೋತ್ಸಾಹ ನೀಡಬಾರದು. ಇಂತಹ ದುಷ್ಕೃತ್ಯ ಮಾಡುವವರನ್ನು ಆರಂಭದಲ್ಲೇ ಚಿವುಟಬೇಕು. ಆಗಷ್ಟೇ ಸಮಾಜದಲ್ಲಿ ನೆಮ್ಮದಿಯಿಂದ ಬದುಕಲು ಸಾಧ್ಯ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.