ಭಾರತದ ನೂತನ ಅಟಾರ್ನಿ ಜನರಲ್‌ ಆಗಿ ಆರ್. ವೆಂಕಟರಮಣಿ ನೇಮಕ

Update: 2022-09-28 16:59 GMT
ಆರ್. ವೆಂಕಟರಮಣಿ (Photo: lloydlawcollege.edu.in)

ಹೊಸದಿಲ್ಲಿ: ಭಾರತದ ನೂತನ ಅಟಾರ್ನಿ ಜನರಲ್(Attorney General) ಆಗಿ ಹಿರಿಯ ವಕೀಲ ಆರ್ ವೆಂಕಟರಮಣಿ (R Venkataramani) ಅವರನ್ನು ನೇಮಕ ಮಾಡಲಾಗಿದೆ. ಅವರು ಮೂರು ವರ್ಷಗಳ ಅವಧಿಗೆ ಅಧಿಕಾರದಲ್ಲಿ ಇರುತ್ತಾರೆ. 

ವೆಂಕಟರಮಣಿ ಅವರನ್ನು ಅಟಾರ್ನಿ ಜನರಲ್ ಆಗಿ ನೇಮಕ ಮಾಡುವ ಕುರಿತು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯದ ಕಾನೂನು ವ್ಯವಹಾರಗಳ ಇಲಾಖೆಯು ಇಂದು ಅಧಿಸೂಚನೆಯನ್ನು ಹೊರಡಿಸಿದೆ.

ವೆಂಕಟರಮಣಿ ಅವರು ಪ್ರಸ್ತುತ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅವರ ಉತ್ತರಾಧಿಕಾರಿಯಾಗಿರಲಿದ್ದಾರೆ. ವೇಣುಗೋಪಾಲ್ ಅವರ‌ ಅಧಿಕಾರ ಅವಧಿಯು ಸೆಪ್ಟೆಂಬರ್ 30, 2022 ರಂದು ಕೊನೆಗೊಳ್ಳುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News