ಗೌತಮ್ ನವ್ಲಾಖಾರನ್ನು ಜೈಲಿನಿಂದ ಬಿಡುಗಡೆ ಮಾಡಿ, ಗೃಹಬಂಧನದಲ್ಲಿ ಇರಿಸಿ: ಸುಪ್ರೀಂಕೋರ್ಟ್

Update: 2022-09-29 16:48 GMT

ಹೊಸದಿಲ್ಲಿ, ಸೆ. 29: ಸಾಮಾಜಿಕ ಹೋರಾಟಗಾರ ಗೌತಮ್ ನವ್ಲಾಖಾ ಅವರನ್ನು ಕಾರಾಗೃಹದಿಂದ ಬಿಡುಗಡೆ ಮಾಡುವಂತೆ ಹಾಗೂ ಗೃಹ ಬಂಧನದಲ್ಲಿ ಇರಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ ನಿರ್ದೇಶಿಸಿದೆ. 

2018ರಲ್ಲಿ ಪುಣೆ ಸಮೀಪದ ಗ್ರಾಮದಲ್ಲಿ ಸಂಭವಿಸಿದ ಜಾತಿ ಹಿಂಸಾಚಾರಕ್ಕೆ ಸಂಬಂಧಿಸಿದ ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿ 70ರ ಹರೆಯದ ಗೌತಮ್ ನವ್ಲಾಖಾ. ಹಿಂಸಾಚಾರಕ್ಕೆ ಪಿತೂರಿ ನಡೆಸಿದ ಆರೋಪದಲ್ಲಿ ಬಂಧಿತರಾದ 16 ಮಂದಿಯಲ್ಲಿ ಇವರು ಕೂಡ ಒಬ್ಬರು. 

ತನ್ನನ್ನು ಗೃಹಬಂಧನದಲ್ಲಿ ಇರಿಸುವಂತೆ ಕೋರಿ ನವ್ಲಾಖ ಅವರು ಎಪ್ರಿಲ್‌ನಲ್ಲಿ ಸಲ್ಲಿಸಿದ ಅರ್ಜಿಯನ್ನು ಬಾಂಬೆ ಉಚ್ಚ ನ್ಯಾಯಾಲಯ ವಜಾಗೊಳಿಸಿತ್ತು. ಅನಂತರ ಅವರು ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿದ್ದರು. ಈ ಮನವಿಗೆ ತಲೋಜ ಕಾರಾಗೃಹದಲ್ಲಿರುವ ಸೌಲಭ್ಯದ ಕೊರತೆ ಹಾಗೂ ಅನಾರೋಗ್ಯದ ಕಾರಣವನ್ನು ಅವರು ನೀಡಿದ್ದರು. ಈ ಮನವಿ ಬಗ್ಗೆ ಪ್ರತಿಕ್ರಿಯೆ ಸಲ್ಲಿಸುವಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ಹಾಗೂ ಮಹಾರಾಷ್ಟ್ರ ಸರಕಾರಕ್ಕೆ  ಸುಪ್ರೀಂ ಕೋರ್ಟ್ ಮಂಗಳವಾರ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News