ಭಾರತವು ಹಸಿವೆ, ನಿರುದ್ಯೋಗದಂತಹ ಸಮಸ್ಯೆಗಳನ್ನು ಎದುರಿಸುತ್ತಿರುವ ʼಬಡವರಿರುವ ಶ್ರೀಮಂತ ದೇಶʼ: ಗಡ್ಕರಿ

Update: 2022-09-29 17:13 GMT

ನಾಗ್ಪುರ (ಮಹಾರಾಷ್ಟ್ರ),ಸೆ.29: ‘ಭಾರತವು ವಿಶ್ವದಲ್ಲಿ ತ್ವರಿತವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದ್ದು,ಐದನೇ ಅತ್ಯಂತ ದೊಡ್ಡ ಆರ್ಥಿಕತೆಯಾಗಿದೆ. ನಾವು ಬಡಜನರನ್ನು ಹೊಂದಿರುವ ಶ್ರೀಮಂತ ದೇಶವಾಗಿದ್ದೇವೆ. ನಮ್ಮ ದೇಶವು ಶ್ರೀಮಂತವಾಗಿದೆ,ಆದರೆ ಜನರು ಬಡವರಾಗಿದ್ದು ಸಮಾಜದ ಪ್ರಗತಿಗೆ ಒಳ್ಳೆಯದಲ್ಲದ ಹಸಿವು, ನಿರುದ್ಯೋಗ, ಬಡತನ, ಹಣದುಬ್ಬರ, ಜಾತಿವಾದ,ಅಸ್ಪಶ್ಯತೆಯಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ’ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ಗುರುವಾರ ಇಲ್ಲಿ ಹೇಳಿದರು.ದೇಶದಲ್ಲಿ ಶ್ರೀಮಂತರು ಮತ್ತು ಬಡವರ ನಡುವಿನ ಅಂತರ ಹೆಚ್ಚಾಗಿದೆ ಮತ್ತು ಇದನ್ನು ಸರಿಪಡಿಸಬೇಕಿದೆ ಎಂದರು.

ಆರೆಸ್ಸೆಸ್ ಪ್ರೇರಿತ ಸಂಸ್ಥೆ ಭಾರತ ವಿಕಾಸ ಪರಿಷದ್ನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಗಡ್ಕರಿ,ಸಮಾಜದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯನ್ನು ಸ್ಥಾಪಿಸುವ ಅಗತ್ಯವಿದೆ. ಸಮಾಜದಲ್ಲಿ ಈ ಎರಡು ವರ್ಗಗಳ ನಡುವಿನ ಕಂದರ ದೊಡ್ಡದಾಗಿದೆ. ಆರ್ಥಿಕ ಅಸಮಾನತೆಯೂ ಸಾಮಾಜಿಕ ಅಸಮಾನತೆಯಂತೆ ಹೆಚ್ಚಾಗಿದೆ ಎಂದರು. ಸಮಾಜದಲ್ಲಿಯ ಶ್ರೀಮಂತ-ಬಡವ ಅಂತರವನ್ನು ನಿವಾರಿಸಲು ಶಿಕ್ಷಣ,ಆರೋಗ್ಯ ಮತ್ತು ಸೇವಾ ಕ್ಷೇತ್ರಗಳಲ್ಲಿ ಪರಿಶ್ರಮದ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News