2019ರ ದೇಶದ್ರೋಹ ಪ್ರಕರಣದಲ್ಲಿ ಶರ್ಜೀಲ್‌ ಇಮಾಮ್‌ಗೆ ಜಾಮೀನು ನೀಡಿದ ದಿಲ್ಲಿ ಕೋರ್ಟ್‌

Update: 2022-09-30 15:45 GMT

ಹೊಸದಿಲ್ಲಿ,ಸೆ.22: 2019ರಲ್ಲಿ ಜಾಮಿಯಾ ಮಿಲಿಯಾ ವಿಶ್ವವಿದ್ಯಾನಿಲಯದಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿರುವ ಜವಾಹರಲಾಲ್ ನೆಹರೂ ವಿವಿ ವಿದ್ಯಾರ್ಥಿ ಶರ್ಜಿಲ್ ಇಮಾಮ್ಗೆ ದೇಶದ್ರೋಹದ ಪ್ರಕರಣದಲ್ಲಿ ಜಾಮೀನು ನೀಡಲಾಗಿದೆ.

ದಿಲ್ಲಿಯ ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶ ಅನುಜ್ ಅಗರ್ವಾಲ್ ಈ ಪ್ರಕರಣದಲ್ಲಿ ಶರ್ಜಿಲ್ ಇಮಾಮ್ಗೆ ಜಾಮೀನು ನೀಡಿ ಆದೇಶ ಹೊರಡಿಸಿದ್ದಾರೆ.

2019ರ ಡಿಸೆಂಬರ್ 13ರಂದು ಶಜಿಲ್ರ್ ಇಮಾಮ್ ಮಾಡಿದ ಭಾಷಣವು, ದಿಲ್ಲಿಯ ನ್ಯೂಫ್ರೆಂಡ್ಸ್ ಕಾಲನಿ ಪ್ರದೇಶದಲ್ಲಿ ಹಿಂಸಾಚಾರಕ್ಕೆ ಕಾರಣವಾಯಿತೆಂದು ಆರೋಪಿಸಿ ದಿಲ್ಲಿ ಪೊಲೀಸರು ಆತನ ವಿರುದ್ಧ ಭಾರತೀಯ ದಂಡಸಂಹಿತೆಯ 12ಎ (ದೇಶದ್ರೋಹ) ಹಾಗೂ 153ಎ ( ವಿವಿಧ ವರ್ಗಗಳ ನಡುವೆ ಶತ್ರುತ್ವಕ್ಕೆ ಪ್ರಚೋದನೆ) ಸೆಕ್ಷನ್ಗಳಡಿ ಪ್ರಕರಣ ದಾಖಲಿಸಿದ್ದಾರೆ.

ಶರ್ಜಿಲ್ ಇಮಾಮ್ 2020ರ ಜನವರಿಯಿಂದೀಚೆಗೆ ನ್ಯಾಯಾಂಗ ಕಸ್ಟಡಿಯಲ್ಲಿದ್ದಾರೆ. 2020 ದಿಲ್ಲಿ ಗಲಭೆ ಪ್ರಕರಣದ ಸಂಚಿನಲ್ಲಿ ಶರ್ಜಿಲ್ ಆರೋಪಿಯೆಂದು ದಿಲ್ಲಿ ಪೊಲೀಸರು ಪರಿಗಣಿಸಿರುವುದರಿಂದ ಅವರು ಜೈಲಿನಲ್ಲಿಯೇ ಉಳಿಯಬೇಕಾಗಿದೆ. ಶರ್ಜಿಲ್ ಅವರನ್ನು 2020, ಜನವರಿ 28ರಂದು ಬಿಹಾರದ ಜಹನಾಬಾದ್ನಲ್ಲಿ ಬಂಧಿಸಲಾಗಿತ್ತು. 2020ರ ಫೆಬ್ರವರಿ ಕೊನೆಯಲ್ಲಿ ದಿಲ್ಲಿ ಗಲಭೆ ಭುಗಿಲೆದ್ದಿತ್ತು.

ಪೌರತ್ವ ಕಾಯ್ದೆ ತಿದ್ದುಪಡಿ ಮಸೂದೆ ವಿರೋಧಿ ಆಂದೋಲನದ ಪ್ರಮುಖ ನಾಯಕರಾದ ಶರ್ಜಿಲ್ಅವರ ವಿರುದ್ಧ ದಿಲ್ಲಿಯಲ್ಲಿ ಎರಡು ಪ್ರಕರಣಗಳು ಬಾಕಿಯುಳಿದಿರುವುದಾಗಿ ಅವರ ಸೋದರ ಮುಝಾಮ್ಮಿಲ್ ಇಮಾಮ್ ಟ್ವಿಟ್ಟರ್ನಲ್ಲಿ ಬರೆದಿದ್ದಾರೆ.

ಅಸ್ಸಾಂ, ಮಣಿಪುರ ಹಾಗೂ ಅರುಣಾಚಲ ಪ್ರದೇಶಗಳಲ್ಲಿಯೂ ಶರ್ಜಿಲ್ ವಿರುದ್ಧ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಭಾಷಣ ವಾಡಿದ ಸಂದರ್ಭದಲ್ಲಿ ಶರ್ಜಿಲ್ ಅವರು  ಅಸ್ಸಾಂನ ಹೆದ್ದಾರಿಗಳಲ್ಲಿ ವಾಹನ ಸಂಚಾರ ತಗೆ ಚಕ್ಕಾ ಜಾಮ್ ಪ್ರತಿಭಟನೆ ನಡೆಸಲು ಕರೆ ನೀಡಿದ್ದರು. ಈ ಪ್ರತಿಭಟನೆಯಿಂದ ಈಶಾನ್ಯ ಭಾರತವು ಭಾರತದ ಉಳಿದ ಭಾಗದಿಂದ ಸಂಪರ್ಕವನ್ನುಕಡದುಕೊಳ್ಳಲಿದ್ದು,ಸರಕಾರವು ನಿರ್ವಾಹವಿಲ್ಲದೆ ಪ್ರತಿಭಟನಕಾರರ ಬೇಡಿಕೆಗಳನ್ನು ಆಲಿಸಬೇಕಾಗುತ್ತದೆಎಂದುಹೇಳಿದ್ದರು.

ತಾನು ಈಗಾಗಲೇ ಜೈಲಿನಲ್ಲಿ 31 ತಿಂಗಳುಗಳನ್ನು ಕಳೆದಿರುವುದರಿಂದ ಭಾರತೀಯ ದಂಡಸಂಹಿತೆಯ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 436 ಎ ಅನ್ವಯ ತನಗೆ ಜಾಮೀನು ಬಿಡುಗಡೆಗೊಳಿಸಬೇಕೆಂದು ಕೋರಿ ಶರ್ಜಿಲ್ ಮೇಲ್ಮನವಿ ಸಲ್ಲಿಸಿದ ಬಳಿಕ ಅವರ ಅರ್ಜಿಯನ್ನು ಪರಿಶೀಲಿಸುವ ದಿಲ್ಲಿ ಹೈತಕೋರ್ಟ್ ವಿಚಾರಣಾ ನ್ಯಾಯಾಲಯಕ್ಕೆ ತಿಳಿಇತ್ತು.

 ಇದೇ ಪ್ರಕರಣಕ್ಕೆ ಸಂಬಂಧಿಸಿ ಜಾಮೀನು ಬಿಡುಗಡೆ ಕೋರಿ 2021ರಲ್ಲಿ ಶಾರ್ಜಿಲ್ ಇಮಾಮ್ ಸಲ್ಲಿಸಿದ ಅರ್ಜಿಯನ್ನು ದಿಲ್ಲಿ ನ್ಯಾಯಾಲಯವು ತಿರಸ್ಕರಿಸಿತ್ತು. ಶಾರ್ಜಿಲ್ ಮಾಡಿದ ಭಾಷಣವು ಪ್ರಚೋದನಕಾರಿಯಾಗಿತ್ತು ಎಂದು ಅದು ಅಭಿಪ್ರಾಯಿಸಿತ್ತು. ಶಾರ್ಜಿಲ್ ವಿರುದ್ಧ ಪ್ರಕರಣಗಳಿಗೆ ಸಂಬಂಧಿಸಿ ದಿಲ್ಲಿ ಪೊಲೀಸರ ನಿಯಮಗಳನ್ನು ಉಲ್ಲಂಘಿಸಿ ತನಿಖೆಗಳನ್ನು ನಡೆಸಿದ್ದಾರೆಂದು ದೇಶಾದ್ಯಂತ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News