ಅಂಕಿತಾ ಹತ್ಯೆ ಪ್ರಕರಣ: ಸಂತ್ರಸ್ತೆಯ ತಂದೆಯನ್ನು ದೂರಿ ಪೋಸ್ಟ್ ಮಾಡಿದ ಆರೆಸ್ಸೆಸ್ ಕಾರ್ಯಕರ್ತನ ವಿರುದ್ಧ ಕೇಸ್

Update: 2022-09-30 11:37 GMT
ಸಾಂದರ್ಭಿಕ ಚಿತ್ರ

ಡೆಹ್ರಾಡೂನ್: ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದ  ಹಾಗೂ ಬಿಜೆಪಿ ನಾಯಕ ವಿನೋದ್ ಆರ್ಯ(Vinod Arya) ಅವರ ಪುತ್ರ ಪುಲ್ಕಿತ್ ಆರ್ಯ ಸೇರಿದಂತೆ ಇನ್ನಿಬ್ಬರ ಬಂಧನಕ್ಕೆ ಕಾರಣವಾಗಿದ್ದ ಪುಲ್ಕಿತ್ ಒಡೆತನದ ರೆಸಾರ್ಟಿನಲ್ಲಿ ರಿಸೆಪ್ಶನಿಸ್ಟ್ ಆಗಿದ್ದ ಅಂಕಿತಾ ಭಂಡಾರಿ ಹತ್ಯೆ ಪ್ರಕರಣ ಕುರಿತಂತೆ ಆಕೆಯ ತಂದೆ ಮತ್ತು ಸಹೋದರನನ್ನು ದೂರಿ ಫೇಸ್ಬುಕ್ ಪೋಸ್ಟ್ ಮಾಡಿದ ಸ್ಥಳೀಯ ಆರೆಸ್ಸೆಸ್ ಕಾರ್ಯಕರ್ತನೊಬ್ಬನ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

ವಿಪಿನ್ ಕರ್ನವಲ್ ಎಂಬ ಆರೆಸ್ಸೆಸ್ ಕಾರ್ಯಕರ್ತ ಇದೀಗ ಡಿಲೀಟ್ ಮಾಡಲಾಗಿರುವ ಆತನ ಪೋಸ್ಟ್‍ನಲ್ಲಿ  ಅನೈತಿಕ ಮತ್ತು ಅಕ್ರಮ ಚಟುವಟಿಕೆಗಳಿಗೆ ಹೆಸರಾದ ಮತ್ತು ಅರಣ್ಯ ಪ್ರದೇಶದಲ್ಲಿದ್ದ ಈ ರೆಸಾರ್ಟಿನಲ್ಲಿ ಉದ್ಯೋಗಕ್ಕೆ ಅಂಕಿತಾರನ್ನು ಕಳುಹಿಸಿದ ಅವರ ತಂದೆಯೇ ಅತ್ಯಂತ ದೊಡ್ಡ ಅಪರಾಧಿ ಎಂದು ಬರೆಯಲಾಗಿತ್ತು.

"ಗಂಡು ಬೆಕ್ಕುಗಳ ಮುಂದೆ ಹಸಿ ಹಾಲನ್ನು ಇಟ್ಟಂತೆ ಅದಾಗಿತ್ತು" ಎಂದೂ ಆತ ಬರೆದಿದ್ದ. ವಿಪಿನ್‍ನ ಫೇಸ್ಬುಕ್ ಪುಟದಲ್ಲಿ ತನ್ನನ್ನು ಆರೆಸ್ಸೆಸ್ ಸದಸ್ಯ ಎಂದು ಬಣ್ಣಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆತನ ಫೇಸ್ಬುಕ್ ಪೋಸ್ಟ್ ಉತ್ತರಾಖಂಡ ಜನರ ಭಾವನೆಗಳಿಗೆ ಘಾಸಿಯುಂಟು ಮಾಡಿದೆ ಎಂದು ದೂರು ನೀಡಿದ ವಿಜಯ್ ಪಾಲ್ ಸಿಂಗ್ ರಾವತ್ ಎಂಬವರು ಹೇಳಿದ್ದಾರೆ.

ಉತ್ತರಾಖಂಡ ಮಹಿಳಾ ಆಯೋಗ ಕೂಡ ಆತನ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News