ರೆಪೋ ರೇಟ್ ಅನ್ನು ಶೇ 0.5 ರಷ್ಟು ಹೆಚ್ಚಿಸಿದ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ

Update: 2022-09-30 11:41 GMT

ಹೊಸದಿಲ್ಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಸಾಲದ ಮೇಲಿನ ಬಡ್ಡಿ ದರವನ್ನು ಶೇ 0.5 ರಷ್ಟು ಏರಿಕೆ  ಮಾಡಿದ್ದು ಇದರಿಂದ ಬಡ್ಡಿ ದರ ಶೇ 5.90 ಆಗಿದ್ದು ಇದು ಕಳೆದ ಮೂರು ವರ್ಷಗಳಲ್ಲಿಯೇ ಗರಿಷ್ಠ ಬಡ್ಡಿ ದರವಾಗಿದೆ.

ಈ ಬಾರಿ ಮಾಡಲಾಗಿರುವ 50 ಬೇಸಿಸ್ ಪಾಯಿಂಟ್‍ಗಳಷ್ಟು ಏರಿಕೆ ಮೇ 2022 ರಿಂದೀಚೆಗೆ ಮಾಡಲಾದ ನಾಲ್ಕನೇ ಸತತ ಏರಿಕೆಯಾಗಿದೆ. ಹಣದುಬ್ಬರದ ಒತ್ತಡ ಹಾಗೂ  ಜಾಗತಿಕವಾಗಿ ಕೇಂದ್ರ ಬ್ಯಾಂಕ್ ನೀತಿಗಳಿಂದಾಗಿ ಅಭಿವೃದ್ಧಿ ಹೊಂದಿದ ಆರ್ಥಿಕತೆಗಳೂ ಎದುರಿಸುತ್ತಿರುವ ಅನಿಶ್ಚಿತತೆಗಳು ಈ ಏರಿಕೆಗೆ ಕಾರಣವಾಗಿದೆ ಎಂದು ಹೇಳಲಾಗಿದೆ.

ಆರ್‍ಬಿಐ ತನ್ನ ರೆಪೋ ದರಗಳನ್ನು ಏರಿಸಿರುವುದರಿಂದ ಈ ಹಿಂದೆ ಮಾಡಿದಂತೆ ಬ್ಯಾಂಕುಗಳು  ಗ್ರಾಹಕರ ಸಾಲಗಳ ಮೇಲಿನ ಬಡ್ಡಿ ದರಗಳ ಏರಿಕೆ ಮಾಡುವ ಸಾಧ್ಯತೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News