ಅಕ್ಟೋಬರ್ 1ರಂದು ಕಾಪುವಿನಲ್ಲಿ ಸಾಮರಸ್ಯ ನಡಿಗೆ

Update: 2022-09-30 14:06 GMT

ಕಾಪು: ಮಹಾತ್ಮ ಗಾಂಧೀಜಿಯವರ ಜನ್ಮದಿನದ ಅಂಗವಾಗಿ ಸಹಬಾಳ್ವೆ ಕಾಪು ತಾಲ್ಲೂಕು ಘಟಕದ ಆಶ್ರಯದಲ್ಲಿ ಅಕ್ಟೋಬರ್ 1ರಂದು ಸಂಜೆ 4.30ಕ್ಕೆ ಸಾಮರಸ್ಯ ನಡಿಗೆ ಆಯೋಜಿಸಲಾಗಿದೆ.

ಕಾಪು ಪ್ರೆಸ್‍ಕ್ಲಬ್‍ನಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಸಹಬಾಳ್ವೆ ಕಾಪು ತಾಲ್ಲೂಕು ಘಟಕದ ಅಧ್ಯಕ್ಷ ನಿರ್ಮಲ್ ಕುಮಾರ್ ಹೆಗ್ಡೆ ಮಾಹಿತಿ ನೀಡಿದರು. 

ಕಾಪು ಜನಾರ್ಧನ ದೇವಸ್ಥಾನದಿಂದ ಪ್ರಾರಂಭಗೊಂಡು ಕಾಪು ಪೇಟೆಯಲ್ಲಿ ನಡಿಗೆ ಸಮಾಪನಗೊಳ್ಳಲಿದೆ. ಸಭೆಯಲ್ಲಿ ಗಾಂಧೀಜಿ ಸೇವಾಶ್ರಮ ಅಧ್ಯಕ್ಷ ದೇವದಾಸ್ ಶೆಟ್ಟಿ, ಫಾ. ವಿಲಿಯಂ ಮಾರ್ಟಿಸ್, ಮೂಳೂರು ಜುಮ್ಮಾ ಮಸೀದಿಯ ಖತೀಬ್ ಇರ್ಷಾದ್ ಸಖಾಫಿ ಮೂಳೂರು ಇವರು ಭಾಗವಹಿಸಲಿದ್ದಾರೆ. ಗಾಂಧೀಜಿಯವರ ಜನ್ಮದಿನದ ಅಂಗವಾಗ ನಾಡಿನ ಸಾಮರಸ್ಯ ಬದುಕಿನ ಉಳಿವಿಗಾಗಿ ಸಹಬಾಳ್ವೆ ಕರ್ನಾಟಕ ರಾಜ್ಯಾದ್ಯಂತ ಸಾಮರಸ್ಯ ನಡಿಗೆಯನ್ನು ಆಯೋಜಿಸಲಾಗಿದೆ. 

ಈ ನಡಿಗೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಹೆಜ್ಜೆ ಹಾಕಿ ನಾಡನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿಸುವಕಲ್ಲಿ ಮಹತ್ತರ ಹೆಜ್ಜೆಯಾಗುತ್ತದೆ ಎಂದು ಅವರು ಹೇಳಿದರು,

ಪ್ರಧಾನ ಕಾರ್ಯದರ್ಶಿ ರೋಲ್ಫಿ ಡಿಕೋಸ್ತ, ಕಾರ್ಯದರ್ಶಿ ತಸ್ನೀನ್ ಅರ್ಹಾ,  ಜಿಲ್ಲಾ ಸಂಚಾಲಕ ಪ್ರಶಾಂತ್ ಜತ್ತನ್ನ, ತಾಲ್ಲೂಕು ಸಂಚಾಲಕರಾದ ನವೀನ್‍ಚಂದ್ರ ಸುವರ್ಣ, ಅಖಿಲೇಶ್, ಇಸ್ಮಾಯಿಲ್ ಕಟಪಾಡಿ, ಅನ್ವರ್ ಅಲಿ ಕಾಪು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News