ಅ.1 ರಂದು ವಿಶ್ವ ಹಿರಿಯರ ದಿನಾಚರಣೆ: ಡಾ.ಟಿಎಂಎ ಪೈ ಆಸ್ಪತ್ರೆಯಲ್ಲಿ ಹಿರಿಯ ನಾಗರಿಕರಿಗೆ ಉಚಿತ ತಪಾಸಣೆ

Update: 2022-09-30 16:33 GMT

ಉಡುಪಿ: ಪ್ರತಿ ವರ್ಷ ಅ.1ನ್ನು ವಿಶ್ವ ಹಿರಿಯರ ದಿನವನ್ನಾಗಿ ಆಚರಿಸಲಾಗುತಿದ್ದು, ಈ ಸಂದರ್ಭದಲ್ಲಿ ಉಡುಪಿಯ ಡಾ.ಟಿ.ಎಂ.ಎ.ಪೈ ಆಸ್ಪತ್ರೆಯು ಅ.1ರ ಶನಿವಾರ ಬೆಳಗ್ಗೆ 9ರಿಂದ ಅಪರಾಹ್ನ 12:00ಗಂಟೆಯವರೆಗೆ ಹಿರಿಯ ನಾಗರಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿದೆ.

ಅಂತಾರಾಷ್ಟ್ರೀಯ ವಯೋವೃದ್ಧರ ದಿನದ ಅಂಗವಾಗಿ ನಡೆಯುವ ಈ ಶಿಬಿರವನ್ನು ಉಡುಪಿಯ ಆರೋಗ್ಯವಂತ ವೃದ್ಧಾಪ್ಯ ಅಧ್ಯಯನ ಕೇಂದ್ರ ಮತ್ತು ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್ ಮಣಿಪಾಲದ ಸಹಯೋಗದೊಂದಿಗೆ ಆಯೋಜಿಸಲಾಗುತ್ತಿದೆ. ಹಿರಿಯ ವಯಸ್ಕರಿಗೆ ಸ್ಕ್ರೀನಿಂಗ್ ಶಿಬಿರ, ದೃಷ್ಟಿ, ಶ್ರವಣ, ಅರಿವು, ಮಾನಸಿಕ ಆರೋಗ್ಯ, ಬೀಳುವ ಅಪಾಯ, ಮಧುಮೇಹ ಪಾದ ತಪಾಸಣೆ, ದೈಹಿಕ ಸಾಮರ್ಥ್ಯ ಮತ್ತು ಕ್ರಿಯಾತ್ಮಕ ಸಾಮರ್ಥ್ಯಗಳ ತಪಾಸಣೆ ನಡೆಸಲಾಗುವುದು.

ಜಿಲ್ಲೆಯ ಹಿರಿಯ ನಾಗರಿಕರು ಈ ಉಚಿತ ತಪಾಸಣಾ ಶಿಬಿರದ ಸದುಪಯೋಗಪಡಿಸಿಕೊಳ್ಳುವಂತೆ ಡಾ. ಟಿಎಂಎ ಪೈ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಶಶಿಕಿರಣ್ ಉಮಾಕಾಂತ್ ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 6364564541ಗೆ ಕರೆ ಮಾಡುವಂತೆ ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News