×
Ad

ಪಿಎಫ್‌ಐ ನಿಷೇಧ ಆರೆಸ್ಸೆಸ್‌ ಅನ್ನು ಸಮಾಧಾನಪಡಿಸುವ ʼರಾಜಕೀಯ ಸ್ವಾರ್ಥದʼ ಕಾರ್ಯ: ಮಾಯಾವತಿ

Update: 2022-09-30 22:14 IST

ಲಖ್ನೋ: ಕೆಲವು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳಿರುವ ಮುನ್ನ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವನ್ನು ನಿಷೇಧಿಸಿರುವುದು ಆರ್‌ಎಸ್‌ಎಸ್‌ ಅನ್ನು ಸಮಾಧಾನಪಡಿಸುವ ಉದ್ದೇಶದ "ರಾಜಕೀಯ ಸ್ವಾರ್ಥದ" ಕಾರ್ಯವಾಗಿದೆ ಎಂದು ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ ಶುಕ್ರವಾರ ಹೇಳಿದ್ದಾರೆ.

ಇದೇ ಕಾರಣಕ್ಕೆ ವಿರೋಧ ಪಕ್ಷಗಳು ಕೂಡ ಈ ವಿಚಾರದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದೆ.  ಸರ್ಕಾರದ ಉದ್ದೇಶ ಹುಸಿಯಾಗಿರುವುದನ್ನು ಪರಿಗಣಿಸಿ, ಆರ್‌ಎಸ್‌ಎಸ್‌ ನಿಷೇಧಕ್ಕೆ ಆಗ್ರಹಿಸಲಾಗುತ್ತಿದೆ. ಪಿಎಫ್‌ಐ ದೇಶದ ಆಂತರಿಕ ಭದ್ರತೆಗೆ ಧಕ್ಕೆ ತರುವುದಾದರೆ, ಇತರ ಅಂತಹ ಸಂಘಟನೆಗಳನ್ನು ಸಹ ಏಕೆ ನಿಷೇಧಿಸಬಾರದು? ಎಂದು ಮಾಯಾವತಿ ಪ್ರಶ್ನಿಸಿದ್ದಾರೆ.

"ಹಿಂಸಾತ್ಮಕ ಭಯೋತ್ಪಾದಕ ಚಟುವಟಿಕೆಗಳಲ್ಲಿ" ತೊಡಗಿಸಿಕೊಂಡಿದೆ ಮತ್ತು ದೇಶದಲ್ಲಿ ಭಯೋತ್ಪಾದನೆಯ ಆಳ್ವಿಕೆಯನ್ನು ಸೃಷ್ಟಿಸುವ ಉದ್ದೇಶವನ್ನು ಹೊಂದಿದೆ, ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಅಪಾಯವನ್ನುಂಟುಮಾಡುತ್ತದೆ ಎಂದು ಆರೋಪಿಸಿದ ಸರ್ಕಾರ ಪಿಎಫ್‌ಐ ಮತ್ತು ಅದರ ಎಂಟು ಅಂಗಸಂಸ್ಥೆಗಳನ್ನು ಐದು ವರ್ಷಗಳ ಕಾಲ ನಿಷೇಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News