ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆ 25 ರೂ. ಕಡಿತ

Update: 2022-10-01 04:52 GMT
Photo:PTI

ಹೊಸದಿಲ್ಲಿ: ಭಾರತೀಯ ತೈಲ ಮಾರುಕಟ್ಟೆ ಕಂಪನಿಗಳು ರಾಷ್ಟ್ರ ರಾಜಧಾನಿಯಲ್ಲಿ ತಕ್ಷಣವೇ ಜಾರಿಗೆ ಬರುವಂತೆ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ commercial LPG cylinders ಬೆಲೆಯನ್ನು  25.50 ರೂ. ರಷ್ಟು ಕಡಿಮೆ ಮಾಡಿದೆ.

ಬೆಲೆಯಲ್ಲಿನ ಈ ಇತ್ತೀಚಿನ ಪರಿಷ್ಕರಣೆಯೊಂದಿಗೆ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ದಿಲ್ಲಿಯಲ್ಲಿ  1,885 ರೂ.ರ ಬದಲಿಗೆ 1,859.50 ರೂ. ಆಗಲಿದೆ.

ಕೋಲ್ಕತ್ತಾದಲ್ಲಿ 1,959 ರೂ. ಹಾಗೂ  ಮುಂಬೈನಲ್ಲಿ  1811.50 ರೂ.ಕ್ಕೆ ಇಳಿಕೆಯಾಗಿದೆ.

ಸರಿಯಾಗಿ ಒಂದು ತಿಂಗಳ ನಂತರ ಬೆಲೆಯಲ್ಲಿ ಪರಿಷ್ಕರಣೆಯಾಗಿದೆ. ಸೆಪ್ಟೆಂಬರ್ 1 ರಂದು  19 ಕೆಜಿ ವಾಣಿಜ್ಯ ಸಿಲಿಂಡರ್‌ನ ಪ್ರತಿ ಯೂನಿಟ್ ಬೆಲೆಯನ್ನು  91.50 ರೂ ಕಡಿಮೆ ಮಾಡಲಾಗಿತ್ತು.

ಆಗಸ್ಟ್ 1 ರಂದು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು  36  ರೂ.ರಷ್ಟು ಕಡಿಮೆ ಮಾಡಲಾಗಿತ್ತು.

ಆದಾಗ್ಯೂ, ದೇಶೀಯ ಸಿಲಿಂಡರ್‌ಗಳ ಬೆಲೆಗಳು ಸ್ಥಿರ ವಾಗಿದೆ. ಜುಲೈ 6 ರಂದು 14.2 ಕೆಜಿ ತೂಕದ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ಪ್ರತಿ ಯೂನಿಟ್‌ಗೆ  50  ರೂ. ಹೆಚ್ಚಿಸಲಾಗಿತ್ತು. ಈ ಹಿಂದೆ, ಗೃಹಬಳಕೆಯ  ಸಿಲಿಂಡರ್‌ಗಳ ಬೆಲೆಯನ್ನು ಮೇ 19, 2022 ರಂದು ಪರಿಷ್ಕರಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News