ಎರಡನೇ ಟ್ವೆಂಟಿ-20: ಭಾರತ ವಿರುದ್ಧ 16 ರನ್‌ನಿಂದ ಸೋತ ದಕ್ಷಿಣ ಆಫ್ರಿಕಾ

Update: 2022-10-02 17:59 GMT
twitter.com/BCCI

 ಗುವಾಹಟಿ, ಅ.2: ಡೇವಿಡ್ ಮಿಲ್ಲರ್(ಔಟಾಗದೆ 106, 47 ಎಸೆತ, 8 ಬೌಂಡರಿ, 7 ಸಿಕ್ಸರ್) ಹಾಗೂ ಕ್ವಿಂಟನ್ ಡಿಕಾಕ್ (ಔಟಾಗದೆ 69 , 48 ಎಸೆತ, 3 ಬೌಂಡರಿ, 4 ಸಿಕ್ಸರ್)ಭರ್ಜರಿ ಜೊತೆಯಾಟದ ಹೊರತಾಗಿಯೂ ದಕ್ಷಿಣ ಆಫ್ರಿಕಾ ತಂಡ 2ನೇ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಭಾರತ ವಿರುದ್ಧ 16 ರನ್ ಅಂತರದಿಂದ ಸೋಲುಂಡಿದೆ.

ಭರ್ಜರಿ ಜಯ ದಾಖಲಿಸಿರುವ ಭಾರತ 3 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿ ತವರು ನೆಲದಲ್ಲಿ ಮೊದಲ ಬಾರಿ ಹರಿಣ ಪಡೆ ವಿರುದ್ಧ ಟಿ-20 ಸರಣಿಯನ್ನು ಗೆದ್ದುಕೊಂಡಿದೆ. ರವಿವಾರ ನಡೆದ ಪಂದ್ಯದಲ್ಲಿ ಗೆಲ್ಲಲು 238 ರನ್ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 221 ರನ್ ಗಳಿಸಿ ಸೋಲೊಪ್ಪಿಕೊಂಡಿತು.

ಡಿಕಾಕ್ ಹಾಗೂ ಮಿಲ್ಲರ್ 4ನೇ ವಿಕೆಟಿಗೆ ಮುರಿಯದ ಜೊತೆಯಾಟದಲ್ಲಿ 174 ರನ್ ಗಳಿಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ.

   ಇದಕ್ಕೂ ಮೊದಲು ಸೂರ್ಯಕುಮಾರ್ ಯಾದವ್(61 ರನ್) ಹಾಗೂ ಕೆ.ಎಲ್.ರಾಹುಲ್(57 ರನ್) ಅರ್ಧಶತಕದ ಕೊಡುಗೆಯ ನೆರವಿನಿಂದ ಭಾರತವು ದಕ್ಷಿಣ ಆಫ್ರಿಕಾ ತಂಡ ದ ಗೆಲುವಿಗೆ 238 ರನ್ ಗುರಿ ನೀಡಿತು.

 ಭಾರತವು ಉತ್ತಮ ಆರಂಭದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 237 ರನ್ ಗಳಿಸಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News