ಟಿ-20 ಕ್ರಿಕೆಟ್: ಪಾಕಿಸ್ತಾನ ವಿರುದ್ಧ ಸರಣಿ ಗೆದ್ದ ಇಂಗ್ಲೆಂಡ್ ತಂಡ

Update: 2022-10-03 02:51 GMT

ಲಾಹೋರ್: ಅತಿಥೇಯ ಪಾಕಿಸ್ತಾನದ ವಿರುದ್ಧದ ಕೊನೆಯ ಟಿ-20 ಪಂದ್ಯವನ್ನು 67 ರನ್‍ಗಳ ಭರ್ಜರಿ ಅಂತರ ದಿಂದ ಗೆದ್ದುಕೊಂಡ ಇಂಗ್ಲೆಂಡ್ ತಂಡ ಏಳು ಪಂದ್ಯಗಳ ಸರಣಿಯನ್ನು 4-3 ಅಂತರದಿಂದ ಜಯಿಸಿದೆ.

ಗೆಲುವಿಗೆ 210 ರನ್‍ಗಳ ಗುರಿ ಪಡೆದ ಬಾಬರ್ ಅಜಾಮ್ ನೇತೃತ್ವದ ತಂಡ ಆರಂಭದಲ್ಲೇ ಕುಸಿತ ಕಂಡಿತು. ಸ್ಫೋಟಕ ಬ್ಯಾಟಿಂಗ್‍ಗೆ ಹೆಸರಾದ ಬಾಬರ್ ಮೊದಲ ಓವರ್‌ನಲ್ಲೇ ಪೆವಿಲಿಯನ್‍ಗೆ ಮರಳಿದರು. ಇಂಗ್ಲೆಂಡ್ ಪರವಾಗಿ ಡೇವಿಡ್ ಮಲಾನ್ ಹಾಗೂ ಹ್ಯಾರಿ ಬ್ರೂಕ್ ಕ್ರಮವಾಗಿ 78 ಹಾಗೂ 46 ರನ್ ಸಿಡಿಸಿ ಪ್ರವಾಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು.

ಲಾಹೋರ್‌ನ ಗಡ್ಡಾಫಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆರಂಭಿಕ ಆಟಗಾರರಾದ ಫಿಲಿಪ್ ಸಾಲ್ಟ್, ಸ್ಫೋಟಕ ಆರಂಭ ದೊರಕಿಸಿಕೊಟ್ಟರು. ಆದರೆ ಪಾಕ್ ಬೌಲರ್‍ಗಳು ಸಾಲ್ಟ್ ಹಾಗೂ ಅಲೆಕ್ಸ್ ಹಾಲೆ ವಿಕೆಟ್‍ಗಳನ್ನು ಕಬಳಿಸುವ ಮೂಲಕ ಓಟಕ್ಕೆ ಕಡಿವಾಣ ಹಾಕಿದರು. ಆದಾಗ್ಯೂ ಇಂಗ್ಲೆಂಡ್ ತಂಡ ನಿಗದಿತ 20 ಓವರ್‍ಗಳಲ್ಲಿ 3 ವಿಕೆಟ್ ನಷ್ಟಕ್ಕೆ 209 ರನ್ ಗಳಿಸಿತು.

ಪಾಕಿಸ್ತಾನದ ಪರ ಶಾನ್ ಮಸೂದ್ (56), ಖುಷ್‍ದಿಲ್ ಶಾ (27) ಮತ್ತು ಇಫ್ತಿಕಾರ್ ಅಹ್ಮದ್ (19) ಮಾತ್ರ ಎರಡಂಕಿ ತಲುಪಲು ಸಾಧ್ಯವಾಯಿತು. ಕ್ರಿಸ್ ಓಕ್ಸ್ (26ಕ್ಕೆ 3), ಡೇವಿಡ್ ವಿಲ್ಲಿ (22ಕ್ಕೆ 2) ನೇತೃತ್ವದ ಇಂಗ್ಲೆಂಡ್ ಬೌಲರ್‍ಗಳು ಸಂಘಟಿತ ಪ್ರಯತ್ನದ ಮೂಲಕ ಅತಿಥೇಯರನ್ನು 142 ರನ್‍ಗಳಿಗೆ ಕಟ್ಟಿಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News